Publish Date: Fri, 26 Oct 2018 (13:19 IST)
Updated Date: Fri, 26 Oct 2018 (13:21 IST)
ಬೆಂಗಳೂರು : ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಶೃತಿ ಹರಿಹರನ್ ಮತ್ತೊಂದು ದೂರು ದಾಖಲಿಸಿದ್ದಾರೆ.
ಪ್ರಶಾಂತ್ ವೈಯಕ್ತಿಕ ಮೆಸೇಜ್‍ಗಳನ್ನು ಸೈಬರ್ ಎಕ್ಸ್ ಪರ್ಟ್‍ಗಳಿಂದ ತೆಗೆಸಿದ್ದಾರೆ. ನನ್ನ ಪರ್ಸನಲ್ ನಂಬರ್ ಕಾಲ್ ಡಿಟೇಲ್ಸ್ ತೆಗೆಯಲು ಇವರ್ಯಾರು?. ಕಾನೂನಿನ ಪ್ರಕಾರವಷ್ಟೇ ಕಾಲ್ ಡಿಟೇಲ್ಸ್ ತೆಗೆಯಲು ಅವಕಾಶವಿದೆ. ಎಥಿಕಲ್ ಹ್ಯಾಕರ್ಸ್ ಮೂಲಕ ನನ್ನ ಮಾಹಿತಿ ಕಲೆ ಹಾಕಿದ್ದಾರೆ. ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲಸಲ್ಲದ ಪೋಸ್ಟ್ ಮಾಡಿದ್ದಾರೆ. ನನ್ನ ವಿರುದ್ಧ ಅವಹೇಳನಕಾರಿ ಪೋಸ್ಟ್‍ಗಳನ್ನು ಮಾಡಿ ಟ್ರೋಲ್ ಮಾಡಲಾಗ್ತಿದೆ. ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿಲಾಗ್ತಿದೆ’ ಎಂದು ಶೃತಿ ಪ್ರಶಾಂತ್ ಸಂಬರಗಿ ವಿರುದ್ಧ ಆರೋಪ ಮಾಡಿದ್ದಾರೆ. ಕೂಡಲೇ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂದು ನಟಿ ಶೃತಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಹಾಗೇ ನಟ ಹಾಗೂ ಫೈರ್ ಸಂಸ್ಥೆ ಮುಖ್ಯಸ್ಥ ಚೇತನ್ ಅವರು ಕೂಡ ಪ್ರಶಾಂತ್ ಸಂಬರಗಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.