Select Your Language

Notifications

webdunia
webdunia
webdunia
webdunia

ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪದ ಸಂಧಾನಕ್ಕೆ ಶೃತಿ ಹರಹರನ್ 1.5 ಕೋಟಿ ಬೇಡಿಕೆಯಿಟ್ಟಿದ್ದು ನಿಜನಾ?

webdunia
ಗುರುವಾರ, 25 ಅಕ್ಟೋಬರ್ 2018 (16:04 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ನಟ ಅರ್ಜುನ್ ಸರ್ಜಾ ಮೇಲೆ  ನಟಿ ಶೃತಿ ಹರಹರನ್ ಮಾಡಿದ ಮೀಟೂ ಆರೋಪ ಬಾರೀ ಸಂಚಲನ ಮೂಡಿಸಿದ್ದು, ಈ ಬಗ್ಗೆ ಸಂಧಾನಕ್ಕೆ ಇದೀಗ ಶೃತಿ ಹರಹರನ್ ಆಪ್ತರೊಬ್ಬರು 1.5 ಕೋಟಿ ಬೇಡಿಕೆಯಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಮೀ ಟೂ ಆರೋಪ ಮಾಡಿದ ಮರುದಿನವೇ ಅನಾಮಿಕರೊಬ್ಬರು ನಟ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಕರೆ ಮಾಡಿ ನಾನು ಶೃತಿ ಹರಿಹರನ್ ಆಪ್ತ ಆರೋಪವನ್ನು ಮುಚ್ಚಿಹಾಕಲು ಹಾಗೂ ಸಂಧಾನ ಮಾಡಿಕೊಳ್ಳಲು ನಮಗೆ 1.5 ಕೋಟಿ ರೂ. ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದಾನೆ ಎಂದು ಶಿವಾರ್ಜುನ್ ಮಾಧ್ಯಮದವರ ಮುಂದೆ ಹೇಳಿದ್ದಾರೆ.


ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶೃತಿ ಹರಿಹರನ್, ಇದು ಸುಳ್ಳು ಆರೋಪ. ನಮ್ಮ ಅಪ್ಪ, ಅಮ್ಮ, ಅಜ್ಜಿ, ತಾತ ಹಾಗೂ ಸಂಬಂಧಿಕರನ್ನು ನಾನು ಕರೆದುಕೊಂಡು ಬಂದಿಲ್ಲ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕುಟುಂಬದವರ ಅಥವಾ ಸ್ನೇಹಿತರ ಸಹಾಯ ಪಡೆಯುವುದಿಲ್ಲ. ಅಷ್ಟೇ ಅಲ್ಲದೆ ನನ್ನ ಆಪ್ತ ರಾಮ್ ಈ ವಿಚಾರದಲ್ಲಿ ತಲೆ ಹಾಕಿಲ್ಲ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia Hindi

ಮುಂದಿನ ಸುದ್ದಿ

ಮೀಟೂ ಆರೋಪ ; ಶ್ರುತಿ ಹರಿಹರನ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ ಅರ್ಜುನ್‌ ಸರ್ಜಾ