Webdunia - Bharat's app for daily news and videos

Install App

ಸಲ್ಮಾನ್‌ಖಾನ್‌ಗೆ ಕೊನೆಗೂ ಪ್ರೀತಿಯ ಯುವತಿ ಸಿಕ್ಕಿದ್ದಾಳಂತೆ...!

ನಾಗಶ್ರೀ ಭಟ್
ಮಂಗಳವಾರ, 6 ಫೆಬ್ರವರಿ 2018 (14:20 IST)
ಯಾವಾಗಲೂ ಏನಾದರೊಂದು ಸುದ್ದಿಯಲ್ಲಿರುವ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈಗ ಟ್ವೀಟ್ ಒಂದರಿಂದ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಈಗ ಬಾಲಿವುಡ್‌ನಲ್ಲಿ ದಿ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆಗಿದ್ದಾರೆ. ಹಲವು ಜನರೊಂದಿಗೆ ಲಿಂಕ್-ಅಪ್‌ಗಳು ಮತ್ತು ಬ್ರೇಕ್‌ಅಪ್‌ಗಳನ್ನು ಮಾಡಿಕೊಂಡಿರುವ ಈ ಸ್ಟಾರ್ ಈಗ ಅಂತಿಮವಾಗಿ ಯಾರೊಂದಿಗೋ ಪ್ರೀತಿಯಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ.
ಆಶ್ಚರ್ಯವಾಯಿತೇ? ನಮಗೂ ಕೂಡ ಆಗಿದೆ. ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್‌ನಲ್ಲಿ "ಮುಝೆ ಲಡಕಿ ಮಿಲ್ ಗಯಿ" (ನನಗೆ ಹುಡುಗಿ ಸಿಕ್ಕಿದ್ದಾಳೆ) ಎಂದು ಬರೆದು ಟ್ವೀಟ್ ಮಾಡುವ ಮೂಲಕ ತಾವು ಹುಡುಗಿಯೊಬ್ಬಳನ್ನು ಹುಡುಕಿರುವುದನ್ನು ಘೋಷಿಸಿದ್ದಾರೆ. ಹಾಗಾಗಿ ಸಲ್ಮಾನ್ ಕುರಿತು ಕನಸು ಕಾಣುತ್ತಿರುವ ಹಲವು ಹುಡುಗಿಯರಿಗೆ ಈ ಟ್ವೀಟ್ ಆಘಾತವನ್ನು ನೀಡಿರುವುದರಲ್ಲಿ ಸಂದೇಹವಿಲ್ಲ.
 
ಈಗ ಪ್ರಶ್ನೆಯಿರುವುದು ಸಲ್ಮಾನ್‌ಗೆ ದೊರೆತಿರುವ ಹುಡುಗಿ ಯಾರು ಎಂಬುದರ ಕುರಿತು. ವರದಿಗಳ ಪ್ರಕಾರ ಸಲ್ಮಾನ್ ರೊಮೆನಿಯಾದ ಲುಲಿಯಾ ವಂತೂರ್ ಅವರನ್ನು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅವರು ಸಲ್ಮಾನ್ ಖಾನ್ ಕುಟುಂಬದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಇದಕ್ಕೆ ಪುಷ್ಟಿ ನೀಡಿತ್ತು. ಆದರೆ ಅವರಿಬ್ಬರೂ ತಮ್ಮ ಸಂಬಂಧದ ಕುರಿತು ಇದುವರೆಗೆ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ.
 
ಇನ್ನೊಂದು ಕಡೆ ವರದಿಯ ಪ್ರಕಾರ ಈ ಹಿಂದೆ ಕತ್ರಿನಾ ಕೈಫ್‌ರನ್ನು ಸಲ್ಮಾನ್ ಡೇಟ್ ಮಾಡುತ್ತಿದ್ದು ನಂತರ ಅವರಿಬ್ಬರ ನಡುವೆ ಬಿರುಕು ಮೂಡಿತ್ತು. ಆದರೆ ಕಷ್ಟದಲ್ಲಿರುವ ಕತ್ರಿನಾಗೆ ಸಲ್ಮಾನ್ ತಮ್ಮ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಅವಕಾಶ ನೀಡಿ ಮತ್ತೆ ಸ್ನೇಹವನ್ನು ಮುಂದುವರಿಸಿದ್ದಾರೆ. ಆದರೆ ಕತ್ರಿನಾ ಹಿಂದೆಂದೂ ಸಲ್ಮಾನ್ ಖಾನ್ ಅವರನ್ನು ಡೇಟ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿಲ್ಲ ಮತ್ತು ತಾವಿಬ್ಬರೂ ಉತ್ತಮ ಸ್ನೇಹಿತರು ಎಂದೇ ಹೇಳಿಕೊಂಡು ಬಂದಿದ್ದಾರೆ.
 
ಪ್ರಸ್ತುತ ಸಲ್ಮಾನ್ ಖಾನ್ ರೇಸ್-3 ಚಿತ್ರದ ಚಿತ್ರೀಕರಣದಲ್ಲಿದ್ದು ಇದು ಹಲವು ಸ್ಟಾರ್‌ಗಳಿಂದ ಕೂಡಿದೆ. ಈಗ ಈ ಟ್ವೀಟ್ ಅನ್ನು ನೋಡಿದರೆ ಇದು ಚಿತ್ರದ ಯಾವುದೋ ಟೀಸರ್‌ಗೆ ಅಥವಾ ಚಲನಚಿತ್ರಕ್ಕೆ ಸಂಬಂಧಿಸಿರಬಹುದಾದ ಬಲವಾದ ಸಾಧ್ಯತೆಗಳಿವೆ. ಏಕೆಂದರೆ ಸಲ್ಮಾನ್ ತಮ್ಮ ಚಿತ್ರದ ಪ್ರಚಾರ ಮಾಡುವುದರಲ್ಲಿ ಎಷ್ಟು ನಿಪುಣರು ಎನ್ನುವುದು ನಮಗೆಲ್ಲಾ ತಿಳಿದಿದೆ.
 
ಆದ್ದರಿಂದ ಇದು ಚಿತ್ರಕ್ಕೆ ಸಂಬಂಧಿಸಿದ ಯಾವುದಾದರೂ ಡೈಲಾಗ್ ಆಗಿದ್ದರೆ ಅಥವಾ ಚಿತ್ರದ ಪಾತ್ರದ ಆಯ್ಕೆಯ ಕುರಿತ ಟ್ವೀಟ್ ಆದರೆ ಆಶ್ಚರ್ಯಗೊಳ್ಳಬೇಡಿ..!!

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments