Select Your Language

Notifications

webdunia
webdunia
webdunia
webdunia

ತನ್ನ ಮಗನನ್ನು ಜ್ಯೂ. ಪವರ್ ಸ್ಟಾರ್ ಎಂದು ಕರೆಯಬೇಡಿ ಎಂದು ರೇಣು ದೇಸಾಯಿ ಹೇಳಿದ್ಯಾಕೆ ?

ತನ್ನ ಮಗನನ್ನು ಜ್ಯೂ. ಪವರ್ ಸ್ಟಾರ್ ಎಂದು ಕರೆಯಬೇಡಿ ಎಂದು ರೇಣು ದೇಸಾಯಿ ಹೇಳಿದ್ಯಾಕೆ ?
ಹೈದರಾಬಾದ್ , ಸೋಮವಾರ, 25 ಜೂನ್ 2018 (12:48 IST)
ಹೈದರಾಬಾದ್ : ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ತನ್ನ ಮಗನನ್ನು ಜ್ಯೂ. ಪವರ್ ಸ್ಟಾರ್ ಎಂದು ಕರೆಯಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.


ರೇಣು ದೇಸಾಯಿ ಹಾಗೂ ಪವನ್ ಕಲ್ಯಾಣ್ ಅವರು  2009 ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದರು. ಆದರೆ ಇಬ್ಬರ ನಡುವಿನ ವೈಮನಸ್ಸಿನಿಂದ 2013 ರಲ್ಲಿ ವಿಚ್ಛೇದನ ಪಡೆದರು. ಆದರೆ  ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವರ ಮಗ 'ಅಕಿರಾ ಫೊಟೋಗೆ ಅಭಿಮಾನಿವೊಬ್ಬರು 'ಜ್ಯೂ. ಪವರ್ ಸ್ಟಾರ್ ಎಂದು ಕಮೆಂಟ್ ಮಾಡಿದ್ದರು. 
ಅದಕ್ಕೆ ರೇಣು ದೇಸಾಯಿ ಅವರು ಅಕಿರಾನನ್ನು ಹಾಗೆ ಕರೆಯುವುದು ನನಗೆ ಹಾಗೂ ಪವನ್‌‌‌ಗೆ ಕೂಡಾ ಇಷ್ಟವಿಲ್ಲ. ಅಷ್ಟೇ ಏಕೆ ಸ್ವತ: ಅಕಿರಾಗೂ ಹಾಗೆ ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಯಾರಾದರೂ ಮತ್ತೊಮ್ಮೆ ಹಾಗೆ ಕಮೆಂಟ್‌‌ ಮಾಡಿದರೆ ಅವರನ್ನು ಬ್ಲಾಕ್ ಮಾಡಲಾಗುವುದು. ಆದ್ದರಿಂದ ತಾವು ದಯಮಾಡಿ ಅವನನ್ನು ಜ್ಯೂ. ಪವರ್ ಸ್ಟಾರ್ ಎಂದು ಕರೆಯುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯೋಗ ಮಾಡಲು ನಟಿ ರಾಖಿ ಸಾವಂತ್ ಧರಿಸಿದ್ದ ಡ್ರೆಸ್ ಯಾವುದು ಗೊತ್ತಾ?