Publish Date: Sat, 23 Jun 2018 (09:37 IST)
Updated Date: Sat, 23 Jun 2018 (09:41 IST)
ಹೈದರಾಬಾದ್ : ಬಾಹುಬಲಿ ಖ್ಯಾತಿಯ ಸ್ಟಾರ್ ನಟ ಪ್ರಭಾಸ್ ಅವರು ತಮ್ಮ ನೆಚ್ಚಿನ ಬಾಲಿವುಡ್ ನಟಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಈಗಾಗಲೇ ಬಾಹುಬಲಿ ಚಿತ್ರದ ಮೂಲಕ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟ ಪ್ರಭಾಸ್ ಅವರು ಬೆಸ್ಟ್ ಯಾಕ್ಟರ್ ಫಿಲ್ಮ್ ಫೇರ್ ಅವಾರ್ಡ್ ಕೂಡ ಪಡೆದಿದ್ದರು. ಇವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತನ್ನ ನೆಚ್ಚಿನ B- ಟೌನ್ ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ. ನಿಮ್ಮ ನೆಚ್ಚಿನ ಬಾಲಿವುಡ್ ನಟಿ ಯಾರು ಎಂದು ಕೇಳಿದ್ದಕ್ಕೆ ನಟ ಪ್ರಭಾಸ್ ಅವರು ‘ದೀಪಿಕಾ, ಕತ್ರಿನಾ ಮತ್ತು ಅಲಿಯಾ’ ಎಂದು ಹೇಳಿದ್ದಾರಂತೆ.
ಈಗಾಗಲೇ “ಸಾಹೋ" ಚಿತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರೊಂದಿಗೆ ಜೋಡಿಯಾಗಿ ನಟಿಸುತ್ತಿರುವ ನಟ ಪ್ರಭಾಸ್ ಅವರಿಗೆ ಮುಂದಿನ ದಿನಗಳಲ್ಲಿ ಅವರ ನೆಚ್ಚಿನ ಬಾಲಿವುಡ್ ನಟಿಯರೊಂದಿಗೆ ನಟಿಸುವ ಅವಕಾಶ ಸಿಗಲಿ ಎಂದು ಆಶಿಸೋಣ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ