ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಸೆಲೆಬ್ರಿಟಿಗಳೇ. ಮದುವೆಯಾದ ಬಳಿಕ ಇವರಿಬ್ಬರಿಗೆ ಒಟ್ಟಾಗಿ ಕೆಲವು ಸಮಯ ಕಳೆಯಲು ಸಿಕ್ಕಿದ್ದೇ ಅಪರೂಪ. ಅದಕ್ಕೇ ಇಬ್ಬರೂ ಒಂದು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.
ಇನ್ನು ಮುಂದೆ ವರ್ಷಕ್ಕೆ 21 ದಿನ ತಮ್ಮ ಸೆಲೆಬ್ರಿಟಿ ಟ್ಯಾಗ್ ಗಳನ್ನೆಲ್ಲಾ ಬದಿಗಿಟ್ಟು ಕೇವಲ ಗಂಡ-ಹೆಂಡಿರಾಗಿರಲು ವಿರುಷ್ಕಾ ತೀರ್ಮಾನಿಸಿದ್ದಾರಂತೆ.
ಇದಕ್ಕಾಗಿ ಜುಲೈನಲ್ಲಿ ವಿರಾಟ್ ಇಂಗ್ಲೆಂಡ್ ಸರಣಿಗೆ ವಿಮಾನವೇರುವಾಗ ಅನುಷ್ಕಾ ಕೂಡಾ ಜತೆಯಾಗಲಿದ್ದಾರಂತೆ. ಜುಲೈ ಪೂರ್ತಿ ಪತಿ ವಿರಾಟ್ ಜತೆಗಿರಲು ಅನುಷ್ಕಾ ಫ್ರೀ ಮಾಡಿಕೊಂಡಿದ್ದಾರಂತೆ. ಅಗಸ್ಟ್ ನಲ್ಲಿ ಅನುಷ್ಕಾ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.