ಹೈದರಾಬಾದ್: ಟಾಲಿವುಡ್ ಅಂಗಳದಲ್ಲಿ ಸದಾ ಸುದ್ದಿಯಲ್ಲಿರುವ ಜೋಡಿಯೆಂದರೆ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ.
ಹಲವು ವರ್ಷಗಳಿಂದ ಈ ಜೋಡಿ ಡೇಟಿಂಗ್‌ನಲ್ಲಿದೆ ಎಂಬುದು ಸುದ್ದಿಯಲ್ಲಿದೆ. ಆದರೆ ಎಲ್ಲೂ ಇವರು ಈ ವಿಷಯವನ್ನು ಖಚಿತಪಡಿಸಿಲ್ಲ. ಆದರೆ ಆಗಾಗ ಒಟ್ಟಿಗೆ ಟ್ರಿಪ್‌ಗೆ, ಡಿನ್ನರ್‌ಗೆ ಹೋಗುತ್ತಿರುವುದು ಕ್ಯಾಮಾರದಲ್ಲಿ ಸೆರೆಯಾಗಿದೆ.
ಇದೀಗ ಈ ಜೋಡಿ ಮತ್ತೇ ಒಟ್ಟಿಗೆ ಕಾಣಿಸಿಕೊಂಡು ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಮಾರ್ಚ್ 30 ರಂದು ರಶ್ಮಿಕಾ ಮತ್ತು ವಿಜಯ್ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡರು. ಒಳಗೆ ಹೋಗುವ ಮೊದಲು ರಶ್ಮಿಕಾ ಛಾಯಾಗ್ರಾಹಕರನ್ನು ನೋಡಿ ಮುಗುಳ್ನಕ್ಕರು. ಕೆಲವು ಕ್ಷಣಗಳ ನಂತರ, ವಿಜಯ್ ಕ್ಯಾಪ್ ಮತ್ತು ಮುಖವಾಡದಿಂದ ಮುಖವನ್ನು ಮರೆಮಾಡಿಕೊಂಡು ಹಿಂಬಾಗಿಲಿನಿಂದ ಪ್ರವೇಶಿಸಿದರು. ಅವರ ಶಾಂತ ಊಟವು ಆನ್‌ಲೈನ್‌ನಲ್ಲಿ ವೈರಲ್ ಆಯಿತು ಮತ್ತು ಮತ್ತೊಮ್ಮೆ ಡೇಟಿಂಗ್ ಮಾತುಕತೆಗಳನ್ನು ಹುಟ್ಟುಹಾಕಿತು.
ಗೀತ ಗೋವಿಂದಂ ಸಿನಿಮಾದ ಮೂಲಕ ಪರಿಷಯವಾದ ಈ ಜೋಡಿ, ಆಮೇಲೆ ಸ್ನೇಹಿತಾರದರು. ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡುವಾಗ ರಶ್ಮಿಕಾ ಮತ್ತು ವಿಜಯ್ ಆತ್ಮೀಯರಾದರು. ಅವರ ತೆರೆಯ ಮೇಲಿನ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಯಿತು.
ಕೆಲ ವರ್ಷಗಳಿಂದಲೂ ಇವರಿಬ್ಬರೂ ಡೇಟಿಂಗ್‌ನಲ್ಲಿರುವ ಬಗ್ಗೆ ವದಂತಿ ಹರಿದಾಡುತ್ತಲೇ ಇದೆ.