ಮುಂಬೈ: ಈ ವರ್ಷದ ಆರಂಭದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ದಾಳಿಯ ನಂತರ, ಬಾಲಿವುಡ್ ತಾರಾ ದಂಪತಿಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಗುರುವಾರ ತಮ್ಮ ಮಗಳು ರಾಹಾ ಅವರ ಫೋಟೋಗಳನ್ನು ಕ್ಲಿಕ್ ಮಾಡದಂತೆ ಮಾಧ್ಯಮಗಳಿಗೆ ವಿನಂತಿಸಿದ್ದಾರೆ.
ರಣಬೀರ್, ಆಲಿಯಾ ಮಗಳು ರಾಹಾ ಅವರ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಪಾಪರಾಜಿಗಳನ್ನು ವಿನಂತಿಸಿದ್ದಾರೆ.
ಅಲಿಯಾ ಭಟ್ ಹುಟ್ಟುಹಬ್ಬದ ಕೆಲವು ದಿನಗಳ ಮೊದಲು ಮಾಧ್ಯಮಗಳ ಬಳಿ ತಮ್ಮ ಮಗುವಿನ ಸುರಕ್ಷತೆಗಾಗಿ ಫೋಟೋವನ್ನು ತೆಗೆಯಬೇಡಿ. ಪೋಷಕರಾಗಿ, ನಾವು ನಮ್ಮ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ನಮ್ಮಿಂದ ಸಾಧ್ಯವಾದಷ್ಟು ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದ್ದಾರೆ..
ಇಂದು ಪ್ರತಿಯೊಬ್ಬರಲ್ಲೂ ಫೋನ್ ಇದೆ, ಏನ್ ಬೇಕಾದರೂ ಪೋಸ್ಟ್ ಮಾಡಬಹುದು, ಮತ್ತು ಅದು ಕಾಡ್ಗಿಚ್ಚಿನಂತೆ ಹರಡಬಹುದು, ಆದ್ದರಿಂದ ಅದು ನಮ್ಮ ನಿಯಂತ್ರಣದಲ್ಲಿಲ್ಲ. ನೀವು ನಮ್ಮ ಕುಟುಂಬದವರಂತೆ, ಆದ್ದರಿಂದ ನಾವು ನಿಮ್ಮನ್ನು ವಿನಂತಿಸುತ್ತಿದ್ದೇವೆ ಎಂದು ಕೇಳಿಕೊಂಡಿದ್ದಾರೆ.
ತಮ್ಮ ವಿನಂತಿಯನ್ನು ಪೂರೈಸದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, "ನಾನು ಮುಂಬೈನಲ್ಲಿ ಹುಟ್ಟಿದ್ದೇನೆ ಮತ್ತು ನೀವೆಲ್ಲರೂ ಕುಟುಂಬ; ನಾವು ಕಾನೂನು ಮಾರ್ಗವನ್ನು ತೆಗೆದುಕೊಳ್ಳುತ್ತೇವೆ ಎಂದಲ್ಲ. ನಾವು ನಿಮ್ಮನ್ನು ಕೇಳಿದಾಗ ಅಥವಾ ನಿಮಗೆ ಬೇಕಾದುದನ್ನು ನೀಡಿದಾಗಲೆಲ್ಲಾ, ನಾವು ಪರಸ್ಪರ ನಮ್ಮ ಮಾತನ್ನು ನಡೆಸಿಕೊಡುತ್ತೇವೆ. ಪದೇ ಪದೇ ಉಲ್ಲಂಘನೆ ಆದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.