Select Your Language

Notifications

webdunia
webdunia
webdunia
webdunia

'ಹುಟ್ಟುಹಬ್ಬದ ಶುಭಶಯಗಳು ಅಮ್ಮ': ಅತ್ತೆಗೆ ಮುದ್ದಾಗಿ ವಿಶ್ ಮಾಡಿದ ಅಲಿಯಾ ಭಟ್

Happy Birthday Mom

Sampriya

ಮುಂಬೈ , ಸೋಮವಾರ, 8 ಜುಲೈ 2024 (17:11 IST)
Photo Courtesy X
ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ತಮ್ಮ ಅತ್ತೆಯನ್ನು ತಾಯಿಯಂತೆ ಪ್ರೀತಿಸುತ್ತಾರೆ. ಇಂದು ಬಾಲಿವುಡ್‌ನ ಹಿರಿಯ ನಟಿ ನೀತು ಕಪೂರ್ ಅವರು  66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರಿಗೆ ಬಾಲಿವುಡ್‌ನ ಸೆಲೆಬೆಟ್ರಿಗಳು ಸೇರಿದಂತೆ ಅಭಿಮಾನಿಗಳು ಬರ್ತಡೇ ವಿಶ್ ಮಾಡುತ್ತಿದ್ದಾರೆ.

ಇನ್ನೂ ನೀತು ಕಪೂರ್ ಸೊಸೆ, ಅಲಿಯಾ ಭಟ್ ಅವರು ಒಂದೇ ಫ್ರೇಮ್‌ನಲ್ಲಿರುವ ತಮ್ಮ ತಾಯಿ ಹಾಗೂ ಅತ್ತೆಯ ಫೋಟೋವನ್ನು ಶೇರ್ ಮಾಡಿ ಶುಭಕೋರಿದ್ದಾರೆ.

ಈ ಚಿತ್ರವು ಆಲಿಯಾ ಭಟ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ತೆಗೆದಿದ್ದು, ಇದರಲ್ಲಿ ನೀತು ಕಪೂರ್ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಸೊಗಸಾಗಿ ಕಾಣುತ್ತಿದ್ದರು. "ಹುಟ್ಟುಹಬ್ಬದ ಶುಭಾಶಯಗಳು ಮಾಮ್! ನನ್ನ ಶಕ್ತಿ, ಶಾಂತಿ ಮತ್ತು ಎಲ್ಲಾ ವಸ್ತುಗಳ ಫ್ಯಾಷನ್.. ಲವ್‌ ಯೂ ಟು ದಿ ಮೂನ್‌ ಆಂಡ್ ಬ್ಯಾಕ್ ಎಂದು ಬರೆದುಕೊಂಡಿದ್ದಾರೆ.

ನೀತು ಕಪೂರ್ ಅವರು ತನ್ನ ಮಗಳು ರಿದ್ಧಿಮಾ ಕಪೂರ್ ಸಾಹ್ನಿ, ಅಳಿಯ ಭರತ್ ಸಾಹ್ನಿ ಮತ್ತು ಮೊಮ್ಮಗಳು ಸಮೈರಾ ಅವರೊಂದಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ತಮ್ಮ 66 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಹಾವೇರಿ ಅಪಘಾತ: ನುಡಿದಂತೆ ನಡೆದ ಶಿವರಾಜ್ ಕುಮಾರ್ ದಂಪತಿ