Publish Date: Thu, 18 Nov 2021 (17:18 IST)
Updated Date: Thu, 18 Nov 2021 (17:20 IST)
ಮುಂಬೈ: ಬಾಲಿವುಡ್ ನಟಿ, ಐಪಿಎಲ್ ಪಂಜಾಬ್ ತಂಡದ ಮಾಲಕಿ ಪ್ರೀತಿ ಝಿಂಟಾ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಪ್ರೀತಿ-ಜೀನ್ ಗುಡ್ ಇನಫ್ ದಂಪತಿ ಈಗ ತಂದೆ-ತಾಯಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರೀತಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿರುವ ಪ್ರೀತಿ ದಂಪತಿ ತಮ್ಮ ಕುಟುಂಬ ನೂತನ ಸದಸ್ಯರಿಗೆ ಜೈ ಜಿಂಟಾ ಗುಡ್ ಇನಫ್ ಮತ್ತು ಜಿಯಾ ಜಿಂಟಾ ಗುಡ್ ಇನಫ್ ಎಂದು ಹೆಸರಿಟ್ಟಿದ್ದಾರಂತೆ. ಅವಳಿ ಮಕ್ಕಳ ಪೋಷಕರಾದ ಪ್ರೀತಿ ದಂಪತಿಗೆ ಶುಭಾಶಯಗಳ ಸುರಿಮಳೆಯಾಗಿದೆ.