ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಪುತ್ರಿ ತ್ರಿಶಾಲಗೆ ಮದುವೆಯಾಗಲು ಯೋಗ್ಯ ವರ ಬೇಕಾಗಿದ್ದಾನಂತೆ. ತಮ್ಮ ಮದುವೆ ಬಗ್ಗೆ ಅವರೇ ಇನ್ ಸ್ಟಾಗ್ರಾಂ ಪ್ರಶ್ನೋತ್ತರಾವಳಿಯಲ್ಲಿ ಹೇಳಿಕೊಂಡಿದ್ದಾರೆ.
ಈ ವೇಳೆ ನೆಟ್ಟಿಗರೊಬ್ಬರು ತ್ರಿಶಾಲಗೆ ಡೇಟಿಂಗ್ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ತ್ರಿಶಾಲ ಈ ವಯಸ್ಸಿನಲ್ಲಿ ಡೇಟಿಂಗ್ ಮಾಡುವುದು ವಿನಾಶಕಾರಿ ಎಂದಿದ್ದಾರೆ.
ಅಲ್ಲದೆ, ಮದುವೆಯಾಗಲು ಒಬ್ಬ ಒಳ್ಳೆಯ ಹುಡುಗನಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ನನ್ನನ್ನು ನಿಜವಾಗಿ ಪ್ರೀತಿಸುವ, ಗೌರವಿಸುವ ಮತ್ತು ಪ್ರೋತ್ಸಾಹಿಸುವ ಒಬ್ಬ ಒಳ್ಳೆಯ ಹುಡುಗ ಸಿಕ್ಕಾಗ ಮದುವೆಯಾಗುತ್ತೇನೆ ಎಂದಿದ್ದಾರೆ ತ್ರಿಶಾಲ.