Select Your Language

Notifications

webdunia
webdunia
webdunia
webdunia

‘100’ ಸಿನಿಮಾ ಮೆಚ್ಚಿಕೊಂಡ ಗೃಹ ಸಚಿವ ಅರಗ ಜ್ಞಾನೇಂದ್ರ

‘100’ ಸಿನಿಮಾ ಮೆಚ್ಚಿಕೊಂಡ ಗೃಹ ಸಚಿವ ಅರಗ ಜ್ಞಾನೇಂದ್ರ
ಬೆಂಗಳೂರು , ಗುರುವಾರ, 18 ನವೆಂಬರ್ 2021 (17:06 IST)
ಬೆಂಗಳೂರು: ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ 100 ಸಿನಿಮಾ ನಾಳೆ ಅಧಿಕೃತವಾಗಿ ತೆರೆಗೆ ಬರಲಿದೆ. ಇದಕ್ಕೂ ಮೊದಲು ಇಂದು ಗೃಹಸಚಿವ ಅರಗ ಜ್ಞಾನೇಂದ್ರ ಅವರಿಗೆ ಚಿತ್ರತಂಡ ವಿಶೇಷ ಪ್ರದರ್ಶನದ ಮೂಲಕ ಸಿನಿಮಾ ತೋರಿಸಿದೆ.
 

100 ಸಿನಿಮಾ ಸೈಬರ್ ಕ್ರೈಂ ಆಧಾರಿತ ಕತೆ ಹೊಂದಿದೆ. ಸಾಮಾಜಿಕ ಜಾಲತಾಣದ ದುರುಪಯೋಗದಿಂದ ಒಂದು ಕುಟುಂಬ ಹೇಗೆ ಸಂಕಷ್ಟಕ್ಕೀಡಾಗುತ್ತದೆ ಎಂಬ ಕತೆ ಈ ಸಿನಿಮಾದಲ್ಲಿದೆ. ಹೀಗಾಗಿ ಈ ಸಿನಿಮಾವನ್ನು ಗೃಹಸಚಿವರಿಗೆ ತೋರಿಸಲು ರಮೇಶ್ ಅರವಿಂದ್ ನಿರ್ಧರಿಸಿದ್ದರು. ಅದರಂತೆ ಖುದ್ದಾಗಿ ಅರಗ ಜ್ಞಾನೇಂದ್ರ ನಿವಾಸಕ್ಕೆ ತೆರಳಿ ಆಹ್ವಾನವಿತ್ತಿದ್ದರು.

ಅದರಂತೆ ಇಂದು ಚಿತ್ರ ವೀಕ್ಷಿಸಿದ ಗೃಹ ಸಚಿವರು, ಸಿನಿಮಾದಲ್ಲಿ ಸಾಮಾಜಿಕ ಜಾಲತಾಣದ ದುರ್ಬಳಕೆ ಬಗ್ಗೆ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಇದು ನಮ್ಮ ಗೃಹ ಇಲಾಖೆ ಕೆಲಸ ಸುಲಭ ಮಾಡಲಿದೆ. ಯುವ ಜನಾಂಗಕ್ಕೆ ಉತ್ತಮ ಸಂದೇಶ ಸಿನಿಮಾದಲ್ಲಿದೆ ಎಂದು ಹೊಗಳಿದ್ದಾರೆ. ನಾಳೆಯಿಂದ ಸಿನಿಮಾ ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಲೀಸ್ ಗೂ ಮೊದಲೇ ಮುಗಿಲ್ ಪೇಟೆ ಸಿನಿಮಾಗೆ ಪೈರಸಿ ಕಾಟ