Publish Date: Tue, 21 Nov 2017 (09:40 IST)
Updated Date: Tue, 21 Nov 2017 (09:42 IST)
ಬೆಂಗಳೂರು: ಪದ್ಮಾವತಿ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಬಿಜೆಪಿ ಮತ್ತು ರಜಪೂತ ಕರ್ಣಿ ಸೇನೆ ನಾಯಕಿ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ನಟಿಯ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಬೆಂಗಳೂರಿನಲ್ಲಿರುವ ದೀಪಿಕಾ ತಂದೆ, ಸಹೋದರಿ ನೆಲೆಸುವ ನಿವಾಸಕ್ಕೆ 4 ಕಾನ್ಸ್ ಟೇಬಲ್ ಗಳನ್ನು ನೇಮಿಸಿರುವ ಗೃಹಸಚಿವ ರಾಮಲಿಂಗಾ ರೆಡ್ಡಿ ಖಡಕ್ ಆಗಿ ಭದ್ರತೆ ಒದಗಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಮಲ್ಲೇಶ್ವರದಲ್ಲಿರುವ ದೀಪಿಕಾ ಅಜ್ಜಿ ಮನೆಗೂ ಭದ್ರತೆ ಒದಗಿಸಲಾಗಿದೆ.
ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಪದ್ಮಾವತಿ ಸಿನಿಮಾದಲ್ಲಿ ವಿವಾದಾತ್ಮಕ ಅಂಶಗಳಿವೆ ಎನ್ನುವ ಕಾರಣಕ್ಕೆ ದೇಶದಾದ್ಯಂತ ಚಿತ್ರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಚಿತ್ರದ ನಾಯಕಿ ದೀಪಿಕಾಗೆ ಜೀವ ಬೆದರಿಕೆ ಹಾಕಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ