Publish Date: Sat, 18 Nov 2017 (08:50 IST)
Updated Date: Sat, 18 Nov 2017 (08:52 IST)
ಮುಂಬೈ: ಪದ್ಮಾವತಿ ಸಿನಿಮಾ ಬಿಡುಗಡೆ ವಿವಾದ ಈಗ ತಾರಕಕ್ಕೇರಿದೆ. ಸಿನಿಮಾ ಬಿಡುಗಡೆಗೆ ವಿಚಾರದಲ್ಲಿ ದೀಪಿಕಾ ಪಡುಕೋಣೆಗೆ ಕರ್ಣಿ ರಜಪೂತ ಸೇನೆ ಮತ್ತು ಛತ್ರಿಯಾ ಸಮಾಜ ಬೆದರಿಕೆ ಹಾಕಿರುವ ಬೆನ್ನಲ್ಲೇ ನಟಿ ತಿರುಗಿಬಿದ್ದಿದ್ದಾರೆ.
ಕರ್ಣಿ ಸೇನೆ ದೀಪಿಕಾ ಮೂಗು ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರೆ, ಛತ್ರಿಯ ಸಮಾಜ ದೀಪಿಕಾ ರುಂಡ ಕತ್ತರಿಸಿ ತಂದವರಿಗೆ 5 ಕೋಟಿ ರೂ. ಬಹುಮಾನ ನೀಡುವುದಾಗಿ ಹೇಳಿಕೊಂಡಿತ್ತು.
ಈ ಎಲ್ಲಾ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಪದ್ಮಾವತಿ ನಾಯಕಿ ದೀಪಿಕಾ, ‘ಏನಾಗುತ್ತೋ ನೋಡೋಣ. ನನಗೆ ದೇಶದ ಕಾನೂನು ವ್ಯವಸ್ಥೆ ಬಗ್ಗೆ ನಂಬಿಕೆಯಿದೆ. ಏನೂ ಅನಾಹುತಗಳಾಗಲ್ಲ ಎಂಬ ನಂಬಿಕೆಯಿದೆ ನನಗೆ’ ಎಂದು ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ