Webdunia - Bharat's app for daily news and videos

Install App

ಶಾಹಿದ್ ಕಪೂರ್ ರೀಲ್ಸ್ ನೋಡಿ ಕೊಹ್ಲಿ ಬಯೋಪಿಕ್ ನೀವೇ ಮಾಡಿ ಎಂದ ಫ್ಯಾನ್ಸ್

Krishnaveni K
ಗುರುವಾರ, 8 ಫೆಬ್ರವರಿ 2024 (13:07 IST)
Photo Courtesy: Twitter
ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ ರೀಲ್ಸ್ ನೋಡಿ ಫ್ಯಾನ್ಸ್ ವಿರಾಟ್ ಕೊಹ್ಲಿ ಬಯೋಪಿಕ್ ಮಾಡುವುದಿದ್ದರೆ ನೀವೇ ಕೊಹ್ಲಿ ಪಾತ್ರ ಮಾಡಿ ಎಂದು ಆಗ್ರಹಿಸಿದ್ದಾರೆ.

ಬ್ಯಾಟ್ ಹಿಡಿದು ಮನೆ ತುಂಬಾ ಓಡಾಡಿಕೊಂಡು ಪ್ರಮೋಷನ್ ನ ನಂತರ ಏನೆಲ್ಲಾ ಮಾಡಬೇಕು ಎಂದು ಫನ್ನಿಯಾಗಿ ಹೇಳುವ ಅಡಿಯೋಗೆ ಲಿಪ್ ಸಿಂಕ್ ಮಾಡಿರುವ ಶಾಹಿದ್ ಥೇಟ್ ಕೊಹ್ಲಿ ಶೈಲಿಯಲ್ಲೇ ಎಕ್ಸ್ ಪ್ರೆಷನ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಕೊಹ್ಲಿ ಬಯೋಪಿಕ್ ಗೆ ನೀವೇ ಸೂಕ್ತ ಎಂದಿದ್ದಾರೆ.

ಶಾಹಿದ್ ನಟನೆಯ ತೇರಿ ಬತಾವೂಂ ಮೈ ಏಸಾ ಉಲ್ಜಾ ಜಿಯಾ ಸಿನಿಮಾದ ಬಿಡುಗಡೆ ಹಂತದಲ್ಲಿದೆ. ಸಿನಿಮಾ ಪ್ರಮೋಷನ್  ನಡುವೆ  ಶಾಹಿದ್ ಇನ್ ಸ್ಟಾಗ್ರಾಂ ರೀಲ್ಸ್ ಮಾಡಿದ್ದು ಭಾರೀ ಹಿಟ್ ಆಗಿದೆ. ಶಾಹಿದ್ ಡೈಲಾಗ್ ಗಮನಿಸಿದರೆ ಹಿಂದೊಮ್ಮೆ ಕೊಹ್ಲಿ ತಮ್ಮ ಮೆಚ್ಚಿನ ಆಹಾರದ ಕುರಿತು ಹೇಳಿದ ರೀತಿಯಲ್ಲೇ ಇದೆ. ಹೀಗಾಗಿ ಫ್ಯಾನ್ಸ್ ಗೆ ಕೊಹ್ಲಿಯ ನೆನಪಾಗಿದೆ.

ತೇರಿ ಬತಾವೂಂ ಮೈ ಏಸಾ ಉಲ್ಜಾ ಜಿಯಾ ಸಿನಿಮಾ ಫೆಬ್ರವರಿ 9 ಕ್ಕೆ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಶಾಹಿದ್ ಜೊತೆ ಕೃತಿ ಸನನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದಲ್ಲದೆ ದೇವ ಎನ್ನುವ ಇನ್ನೊಂದು ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಸೌತ್ ಸುಂದರಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಮುಂದಿನ ಸುದ್ದಿ
Show comments