ಯಾರಿಗೋ ಪೈಪೋಟಿ ಕೊಡಬೇಕೆಂದು ಅಪ್ ಡೇಟ್ ಕೊಡಲ್ಲ: ಕಿಚ್ಚ ಸುದೀಪ್

Krishnaveni K
ಗುರುವಾರ, 8 ಫೆಬ್ರವರಿ 2024 (12:14 IST)
ಬೆಂಗಳೂರು: ಇತ್ತೀಚೆಗೆ ಕಿಚ್ಚ ಸುದೀಪ್ ಎಲ್ಲೇ ಹೋದರೂ ಅವರಿಗೆ ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಕೊಡಿ ಎಂದು ಕೇಳುತ್ತಲೇ ಇರುತ್ತಾರೆ. ಅಪ್ ಡೇಟ್ ಕೊಡಿ ಎಂಬ ಬೇಡಿಕೆಗೆ ಬೇಸತ್ತ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

ಎಷ್ಟೋ ಮಂದಿ ಸುದೀಪ್  ಬಿಗ್ ಬಾಸ್ ಮತ್ತು ಸಿಸಿಎಲ್ ಕಮಿಟ್ ಮೆಂಟ್ ಗಳಿಂದಾಗಿ ಸಿನಿಮಾ ಕಡೆಗೆ ಇತ್ತೀಚೆಗೆ ಗಮನ ಕೊಡಲಾಗುತ್ತಿಲ್ಲ. ಹೀಗಾಗಿ ಮ್ಯಾಕ್ಸ್ ಸಿನಿಮಾ ಕೂಡಾ ಮುಂದವರಿಯುತ್ತಿಲ್ಲ ಎಂದು ಆರೋಪ ಮಾಡಿದ್ದರು. ಈ ಎಲ್ಲಾ ಆರೋಪಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಸುದೀರ್ಘ ಪ್ರತಿಕ್ರಿಯೆ ನೀಡಿದ್ದಾರೆ.

ಸುದೀಪ್ ಬರೆದ ಪತ್ರದಲ್ಲೇನಿದೆ?
ಹಲವಾರು ಮಂದಿ ಅಪ್ ಡೇಟ್ ಕೊಡಿ ಎಂದು ಟ್ವೀಟ್ ಗಳ ಸುರಿಮಳೆ ಮಾಡುತ್ತಿರುವುದು ನೋಡಿದರೆ ಕ್ರೇಜಿ ಎನಿಸುತ್ತದೆ.  ಅಪ್ ಡೇಟ್ ಎನ್ನುವುದು ಇನ್ನೊಬ್ಬ ನಟ ಅಥವಾ ಅವರ ಸಿನಿಮಾಗಳ ಜೊತೆ ಪೈಪೋಟಿ ನಡೆಸಲು ಕೊಡುವಂತಹದ್ದು ಅಲ್ಲ. ಚಿತ್ರತಂಡ ಕೆಲಸ ಮುಗಿಸಿ ಜನರಿಗೆ ಏನನ್ನಾದರೂ ಹೇಳಬೇಕು ಎಂದು ಅನಿಸಿದಾಗ ಅದನ್ನು ಹೊರ ಹಾಕುತ್ತದೆ. ನನ್ನ ಕೆಲಸಗಳಿಗೆ ನಿಮ್ಮ ಪ್ರೋತ್ಸಾಹ ನನಗೆ ತೀವ್ರ ಖುಷಿ ತಂದಿದೆ. ಆದರೆ ವಿಪರ್ಯಾಸವೆಂದರೆ ಕೆಲವರು ಮ್ಯಾಕ್ಸ್ ಅಪ್ ಡೇಟ್ ನಿಧಾನವಾಗಲು ಬಿಗ್ ಬಾಸ್/ಸಿಸಿಎಲ್ ಚಟವಟಿಕೆಗಳೇ ಕಾರಣ ಎಂದು ದೂರುತ್ತಿದ್ದಾರೆ.  ಮ್ಯಾಕ್ಸ್ ಬಗ್ಗೆ ನಾನು ಎಲ್ಲಕ್ಕಿಂತ ಹೆಚ್ಚು ಗಮನಕೊಡುತ್ತಿದ್ದೇನೆ. ಅದು ಅದರ ಪಾಡಿಗೆ  ತಯಾರಾಗುತ್ತಿದೆ’ ಎಂದಿದ್ದಾರೆ ಕಿಚ್ಚ.

ಮ್ಯಾಕ್ಸ್ ಸಿನಿಮಾ ಕಡೆಯಿಂದ ಒಂದು ಪೋಸ್ಟರ್ ಬಿಟ್ಟರೆ ಇದುವರೆಗೆ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ. ಹೀಗಾಗಿ ಜನ ಶೂಟಿಂಗ್ ಮುಗಿದಿಲ್ವಾ? ಟೀಸರ್ ಯಾವಾಗ, ರಿಲೀಸ್ ಯಾವಾಗ ಅಪ್ ಡೇಟ್ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಈ ಎಲ್ಲಾ ಅನುಮಾನಗಳಿಗೆ ಸುದೀಪ್ ಈಗ ಉತ್ತರ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments