Publish Date: Fri, 22 Dec 2023 (12:17 IST)
Updated Date: Fri, 22 Dec 2023 (12:19 IST)
ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಡಂಕಿ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಪಠಾಣ್, ಜವಾನ್ ಬಳಿಕ ಶಾರುಖ್ ಖಾನ್ ಅಭಿನಯದ ಮತ್ತೊಂದು ಸಿನಿಮಾ ಈ ವರ್ಷ ಬಿಡುಗಡೆಯಾಗಿದೆ. ಈ ಸಿನಿಮಾವೂ ದಾಖಲೆಯ ಗಳಿಕೆ ಮಾಡಬಹುದು ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ದರು.
ಆದರೆ ಪಠಾಣ್, ಜವಾನ್ ನಷ್ಟು ಡಂಕಿ ಗಳಿಕೆ ಮಾಡಿಲ್ಲ. ಮೊದಲ ದಿನ ಡಂಕಿ ಗಳಿಕೆ ಮಾಡಿದ್ದು ಸುಮಾರು 30 ಕೋಟಿ ರೂ.ಗಳಷ್ಟು. ಇದಕ್ಕೆ ಮೊದಲು ಬಿಡುಗಡೆಯಾಗಿದ್ದ ಶಾರುಖ್ ನಾಯಕರಾಗಿದ್ದ ಜವಾನ್ ಸಿನಿಮಾ ಮೊದಲ ದಿನವೇ 75 ಕೋಟಿ ಕಮಾಯಿ ಮಾಡಿತ್ತು.
ಆದರೆ ಡಂಕಿ ಅಷ್ಟು ಗಳಿಕೆ ಮಾಡಿಲ್ಲ. ಇಂದು ಬಿಡುಗಡೆಯಾಗಿರುವ ಸಲಾರ್ ಸಿನಿಮಾ ಜೊತೆ ಡಂಕಿ ಬಾಕ್ಸ್ ಆಫೀಸ್ ನಲ್ಲಿ ಪೈಪೋಟಿಗಿಳಿದಿತ್ತು. ಆದರೆ ಈಗ ಸಲಾರ್ ಹೆಚ್ಚಿನ ಗಳಿಕೆ ಮಾಡಬಹುದು ಎನ್ನಲಾಗಿದೆ.