ಮುಂಬೈ: ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ದಂಪತಿ ಮುಂಬೈನಲ್ಲಿ 119 ಕೋಟಿ ರೂ. ಬೆಲೆ ಬಾಳುವ ಮನೆ ಖರೀದಿ ಮಾಡಿದ್ದಾರೆ.
ವಿಶೇಷವೆಂದರೆ ಈ ಮನೆ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಿವಾಸದ ಬಳಿಯಲ್ಲೇ ಇದೆ. ಹೀಗಾಗಿ ಈಗ ದೀಪಿಕಾ-ರಣವೀರ್ ಸಲ್ಮಾನ್, ಶಾರುಖ್ ನೆರೆಮನೆಯವರಾಗಿದ್ದಾರೆ.
ಬಾಂದ್ರಾದ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ನಾಲ್ಕು ಅಂತಸ್ತಿನ ಮನೆ ಇದಾಗಿದ್ದು ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡಿದೆ.