Select Your Language

Notifications

webdunia
webdunia
webdunia
webdunia

ಚೀನಾ ವಸ್ತುಗಳ ರಾಯಭಾರಿಗಳಾಗಿರುವ ತಾರೆಯರಿಗೆ ಈಗ ಉಭಯ ಸಂಕಟ

ಚೀನಾ ವಸ್ತುಗಳ ರಾಯಭಾರಿಗಳಾಗಿರುವ ತಾರೆಯರಿಗೆ ಈಗ ಉಭಯ ಸಂಕಟ
ಮುಂಬೈ , ಗುರುವಾರ, 25 ಜೂನ್ 2020 (09:14 IST)
ಮುಂಬೈ: ಬಾಲಿವುಡ್ ನ ಬಹುತೇಕ ತಾರೆಯರಿಗೆ ತಮ್ಮ ಸಿನಿಮಾವಲ್ಲದೆ ಪ್ರಮುಖ ಕಂಪನಿಗಳ ರಾಯಭಾರತ್ವದಿಂದಲೇ ಹೇರಳವಾಗಿ ಆದಾಯ ಬರುತ್ತಿದೆ. ಆದರೆ ಈಗ ಭಾರತದಲ್ಲಿ ಚೀನಾ ವಸ್ತುಗಳ ಮೇಲೆ ಬಹಿಷ್ಕಾರದ ಕೂಗು ಎದ್ದಿರುವುದರಿಂದ ತಾರೆಯರಿಗೆ ಉಭಯ ಸಂಕಟ ಶುರುವಾಗಿದೆ.


ಚೀನಾ ಮೂಲದ ಪ್ರಮುಖ ಮೊಬೈಲ್, ಶೂ, ಆನ್ ಲೈನ್‍ ಮಾರುಕಟ್ಟೆ ಕಂಪನಿಗಳ ರಾಯಭಾರಿಯಾಗಲು ಕೋಟಿಗಟ್ಟಲೆ ಸಂಭಾವನೆ ಪಡೆಯುವ ಬಾಲಿವುಡ್ ತಾರೆಯರಿಗೆ ಈಗ ಆ ವಸ್ತುಗಳನ್ನು ಪ್ರಚುರಪಡಿಸುವ ಜಾಹೀರಾತಿನಲ್ಲಿ ನಟಿಸಿದರೆ ಅಭಿಮಾನಿಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಭಯ ಕಾಡಿದೆ.

ಒಂದು ವೇಳೆ ಅವುಗಳನ್ನು ಪ್ರಚಾರ ಮಾಡದೇ ಇದ್ದರೆ ಕೋಟ್ಯಂತರ ರೂಪಾಯಿ ಆದಾಯಕ್ಕೆ ಕತ್ತರಿ ಬೀಳುತ್ತದೆ. ಹೀಗಾಗಿ ತಾರೆಯರು ಕೆಲವು ಕಾಲ ಸುಮ್ಮನಿದ್ದು ಜನರ ಆಕ್ರೋಶ ತಣ್ಣಗಾದ ಮೇಲೆ ತಮ್ಮ ಒಪ್ಪಂದದಂತೆ ನಡೆದುಕೊಳ್ಳುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರತ್ನ ಹಾಡಿನ ಚಿತ್ರೀಕರಣ ಮಾಡಲಾಗದೇ ಸಂಕಟದಲ್ಲಿ ಚಿತ್ರತಂಡ