ಪ್ರಭಾಸ್ ಜೊತೆಗಿನ ಮದುವೆ ಕುರಿತ ಪ್ರಶ್ನೆಗೆ ಅನುಷ್ಕಾ ಪ್ರತಿಕ್ರಿಯೆ ಏನು ಗೊತ್ತಾ?

ರಾಮಕೃಷ್ಣ ಪುರಾಣಿಕ
ಸೋಮವಾರ, 12 ಫೆಬ್ರವರಿ 2018 (18:32 IST)
ದೀಪ್‌ವೀರ್ (ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್) ಅಭಿಮಾನಿಗಳು ಮಾತ್ರವಲ್ಲ, ಪ್ರನುಷ್ಕಾ (ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ) ಅಭಿಮಾನಿಗಳು ಸಹ ಇಬ್ಬರು ಪರಸ್ಪರ ಮದುವೆಯಾಗುವುದನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.
ಎಸ್.ಎಸ್ ರಾಜಮೌಳಿಯ ಎರಡು ಅವತರಣಿಕೆಯ ಚಿತ್ರವಾದ ಬಾಹುಬಲಿ, ಪ್ರಭಾಸ್ ಮತ್ತು ಅನುಷ್ಕಾ ಅವರಿಬ್ಬರ ಜೋಡಿಯ ಮೊದಲ ಚಿತ್ರ ಅಲ್ಲ. ಅಮರೇಂದ್ರ ಬಾಹುಬಲಿ ಮತ್ತು ದೇವಸೇನಾ ಪಾತ್ರಗಳಾಗಿ ಅವರಿಬ್ಬರ ನಡುವಿನ ನಟನಾ ಬಾಂಧವ್ಯ ಮನೋಜ್ಞವಾಗಿತ್ತು. ಅವರಿಬ್ಬರ ಜೋಡಿಯು ಬೆರಗುಗೊಳಿಸುವಂತಿತ್ತು ಮತ್ತು ಆದರ್ಶ ಪತಿ-ಪತ್ನಿ ಜೋಡಿಯಾಗಿ ಕಾಣಿಸಿಕೊಂಡಿದ್ದರು, ಇದು ಅವರಿಗೆ ಮದುವೆಯ ಪ್ರಸ್ತಾಪದಂತೆ ಕಂಡುಬಂದಿತ್ತು.
 
ಚಲನಚಿತ್ರದಲ್ಲಿ, ಪ್ರೀತಿಯಲ್ಲಿ ಮಿಂದಿರುವ ಜೋಡಿಯಾಗಿ ಕಾಣಿಸಿಕೊಂಡಿದ್ದ ಪ್ರಭಾಸ್ ಮತ್ತು ಅನುಷ್ಕಾ ಈ ಮೊದಲು ಎಂದಿಗೂ ಪ್ರದರ್ಶಿಸದ ಪ್ರಣಯದ ದೃಶ್ಯಗಳಲ್ಲಿ ಅತ್ಯದ್ಭುತವಾಗಿ ನಟಿಸಿದ್ದರು. ಈ ಕಾರಣಕ್ಕಾಗಿಯೇ ಅಭಿಮಾನಿಗಳು ಅವರ ರೀಲ್-ಲೈಫ್‌ನ ಕೆಮೆಸ್ಟ್ರಿಯನ್ನು ರಿಯಾಲಿಟಿ ಆಗಿ ನಿಜ ಜೀವನದಲ್ಲಿ ನೋಡಲು ಹತಾಶರಾಗಿದ್ದಾರೆ.
 
ಪ್ರಭಾಸ್ ಮತ್ತು ಅನುಷ್ಕಾ ಇಬ್ಬರೂ ಸಂಬಂಧದಲ್ಲಿರುವ ವಿಷಯವನ್ನು ನಿರಾಕರಿಸಿದ್ದಾರೆ, ಈ ನಿರಾಕರಣೆ ಅವರ "ಸನ್ನಿಹಿತ ವಿವಾಹದ" ಕುರಿತು ವದಂತಿಗಳನ್ನು ಮುಚ್ಚುವುದಕ್ಕೆ ನಿರಾಕರಿಸಿದಂತೆ ತೋರುತ್ತಿದೆ.
 
ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಪ್ರಭಾಸ್ ಜೊತೆಗಿನ ಅವರ ಮದುವೆಯ ಕುರಿತು ಅನುಷ್ಕಾಗೆ ಪ್ರತಿಕ್ರಿಯೆ ಕೇಳಿದಾಗ, “ಪ್ರಭಾಸ್ ಮತ್ತು ನಾನು ಮದುವೆಯಾಗುತ್ತಿಲ್ಲ. ಬಾಹುಬಲಿ ಮತ್ತು ದೇವಾಸೇನೆಯ ಪ್ರೀತಿಯನ್ನು ನಿಜ ಜೀವನದಲ್ಲಿ ನಿರೀಕ್ಷಿಸಬೇಡಿ. ಅದು ಕೇವಲ ಚಲನಚಿತ್ರಕ್ಕಾಗಿ ಮಾಡಿದ ನಟನೆ.” ಎಂದು ಹೇಳಿದ್ದಾರೆ.
 
ಕಾರ್ಯಕ್ರಮವೊಂದರಲ್ಲಿ ಕೇಳಿದ ಇದೇ ರೀತಿಯ ಪ್ರಶ್ನೆಗೆ ಪ್ರಭಾಸ್ ಅವರ ಪ್ರತಿಕ್ರಿಯೆ ಕೂಡ ವರದಿಯಾಗಿದೆ. “ನಾವು ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡುವಾಗ, ನಮ್ಮ ಸುತ್ತ ನಡೆಯುವ ದಂತಿಗಳಿಗೆ ಯಾವುದೇ ಸೊಪ್ಪು ಹಾಕುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಾವು ಒಂಬತ್ತು ವರ್ಷಗಳಿಂದ ಚಲನಚಿತ್ರದ ಸ್ನೇಹಿತರಾಗಿದ್ದೇವೆ. ನಾವು ಒಳ್ಳೆಯ ಸ್ನೇಹಿತರು. ನಾವು ಕೆಲವು ವರ್ಷಗಳಿಂದ ಪರಸ್ಪರ ಅರಿತುಕೊಂಡಿದ್ದೇವೆ ಆದರೆ ನಾನು ಕೆಲವೊಮ್ಮೆ ಒಪ್ಪಿಕೊಳ್ಳುತ್ತೇನೆ ಅದು ಏನಂದರೆ ಇಂತಹ ವದಂತಿಗಳು ನಮ್ಮನ್ನು ಸುತ್ತುವುದನ್ನು ಪ್ರಾರಂಭಿಸಿದಾಗ ನಮ್ಮಿಬ್ಬರ ಸಡುವೆ ಅಂತಹ ಭಾವನೆ ಇರುವುದೇ ಎಂದು ನಾನೂ ಸಹ ಅಚ್ಚರಿ ಪಡುತ್ತೇನೆ.” ಎಂದು ಪ್ರಭಾಸ್ ಹೇಳಿದ್ದರು.
 
ಪ್ರನುಷ್ಕಾ ಅಭಿಮಾನಿಗಳು ಖಂಡಿತವಾಗಿಯೂ ಈ ರೀತಿಯ ಪ್ರತಿಕ್ರಿಯೆಯ ಕುರಿತು ಓದಲು ಇಷ್ಟಪಡುವುದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಆದರೆ ಅವರು ತಮ್ಮ ಅಭಿಮಾನಿಗಳಿಗೆ ಇಂದು ಅಥವಾ ನಾಳೆ ಆಶ್ಚರ್ಯಕರ ರೀತಿಯಲ್ಲಿ ಸುಖಾಂತ್ಯವನ್ನು ಸಾರಬಹುದು ಎಂದು ಯಾರಿಗೆ ತಾನೇ ತಿಳಿದಿದೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments