ದೀಪಿಕಾ ಮತ್ತು ರಣವೀರ್ ಅವರ ಇತ್ತೀಚಿನ ಚಿತ್ರ ಪದ್ಮಾವತ್ ಯಶಸ್ಸಿನ ನಂತರ, ಅವರ ಸಂತೋಷಕ್ಕೆ ಮತ್ತೊಂದು ಕಾರಣ ಇಲ್ಲಿದೆ. ಪದ್ಮಾವತ್ ಚಿತ್ರವು ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಸೂಪರ್ ಹಿಟ್ ಆಗಿ ಘೋಷಿಸಲ್ಪಟ್ಟಿದೆ ಮತ್ತು ಎರಡೂ ತಾರೆಗಳು ತಮ್ಮ ಉತ್ತಮ ಪ್ರದರ್ಶನಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ. ಚಿತ್ರವು 200 ಕೋಟಿಗೂ ಹೆಚ್ಚಿನ ಹಣವನ್ನು ಗಳಿಸಿದೆ. ಬಿಡುಗಡೆಗೂ ಮುನ್ನ ದೊಡ್ಡ ವಿವಾದ ಹುಟ್ಟುಹಾಕಿದ್ದ 'ಪದ್ಮಾವತ್' ಚಿತ್ರ ಯಶಸ್ವಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
	ಆದೇನೆ ಇದ್ದರು, ವರದಿಗಳ ಪ್ರಕಾರ ದೀಪಿಕಾ ಮತ್ತು ರಣವೀರ್ ಬೇರೆ ಏನೋ ಯೋಜನೆಯಲ್ಲಿ ಬ್ಯುಸಿ ಆಗಿದ್ದಾರೆ. ಕಾರಣ, ರಣವೀರ್ ಮತ್ತು ದೀಪಿಕಾ ಶೀಘ್ರದಲ್ಲೇ ವಿವಾಹವಾಗಲಿದ್ದಾರಂತೆ.
 
 			
 
 			
					
			        							
								
																	
	 
	ವರದಿಗಳ ಪ್ರಕಾರ - "ಹೌದು, ರಣವೀರ್ ಮತ್ತು ದೀಪಿಕಾ ಈ ವರ್ಷ ಮದುವೆಯಾಗಲಿದ್ದಾರೆ ಮತ್ತು ಅದು ಡೆಸ್ಟಿನೇಶನ್ ವೆಡ್ಡಿಂಗ್ ಆಗಲಿದೆ. ಅವರಿಬ್ಬರು ಬೀಚ್ ಪ್ರಿಯರಾಗಿರುವ ಕಾರಣ ಮತ್ತು ನೀವು ಬೀಚ್ ವೆಡ್ಡಿಂಗ್ ಅನ್ನು ನಿರೀಕ್ಷಿಸಬಹುದು. ಇದು ನಿಕಟ ಸಂಬಂಧಿಗಳು ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ನಡೆಯಲಿರುವ ಒಂದು ಅದ್ಭುತ ವಿವಾಹವಾಗಲಿದೆ" ಎಂದಿದ್ದಾರೆ.
	 
	ಮದುವೆಯು ನಂತರ ನಡೆಯಲಿರುವ ಆರತಕ್ಷತೆಯು ಒಮ್ಮೆ ಮುಂಬೈಯಲ್ಲಿ ಇನ್ನೊಮ್ಮೆ ಬೆಂಗಳೂರಿನಲ್ಲಿ ನಡೆಯಲಿದೆಯಂತೆ.
	ರಣವೀರ್ ಮತ್ತು ದೀಪಿಕಾ ತಮ್ಮ ವಿವಾಹವನ್ನು, ವಿರುಷ್ಕಾ ರೀತಿಯಲ್ಲಿ ರಹಸ್ಯವಾಗಿ ಮಾಡದಿರಲಿ ಎಂದು ಆಶಿಸೋಣ !