Select Your Language

Notifications

webdunia
webdunia
webdunia
webdunia

ಫೆಬ್ರವರಿ 2019 ರೊಳಗೆ ಕಂಗನಾ ರಾನೌತ್ ಮದುವೆಯಾಗಲಿದ್ದಾರಂತೆ

ಫೆಬ್ರವರಿ 2019 ರೊಳಗೆ ಕಂಗನಾ ರಾನೌತ್ ಮದುವೆಯಾಗಲಿದ್ದಾರಂತೆ

ಅತಿಥಾ

ಬೆಂಗಳೂರು , ಮಂಗಳವಾರ, 6 ಫೆಬ್ರವರಿ 2018 (18:10 IST)
ನಟಿ ಕಂಗನಾ ರನೌತ್ ಹಾಗು ಹೃತಿಕ್ ರೋಷನ್ ಅವರ ವಿವಾದದ ನಡುವೆಯು 2017 ರಲ್ಲಿ ಒಮ್ಮೆ ಕಂಗನಾ " ನಾನು ಶೀಘ್ರದಲ್ಲೇ ವಿವಾಹವಾಗಲಿದ್ದೇನೆ'' ಎಂದು ಹೇಳಿ ತನ್ನ ಅಭಿಮಾನಿಗಳಿಗೆ ಆಶ್ಚರ್ಯ ಪಡಿಸಿದ್ದರು.
ಆದರೆ ಈಗ, ಲೆಕ್ಮೆ ಫ್ಯಾಷನ್ ವೀಕ್ 2018 ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಫೈರ್‌ಬ್ರ್ಯಾಂಡ್ ಕಂಗನಾ, ಅವರ ಮದುವೆಯ ಯೋಜನೆಗಳ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ, ''ಫೆಬ್ರವರಿ 2019 ರವರೆಗೆ ಸಮಯ ನೀಡಿ" "ಶೀಘ್ರದಲ್ಲೇ ಮದುವೆಯಾಗಲಿದ್ದೇನೆ" ಎಂದು ಹೇಳಿದ್ದಾರೆ.
 
ಅದೇನಿದ್ದರು, ಕಂಗನಾ ತನ್ನ ಸಂಗಾತಿಯನ್ನು ಬೇಗನೆ ಕಂಡುಕೊಳ್ಳಲಿ ಎಂದು ನಾವು ಆಶಿಸೋಣ!
 
ಕಂಗನಾ ತನ್ನ ಮುಂದಿನ ಚಿತ್ರ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಕೃಷ್ ಜಗರ್ಲಾಮುಡಿ ನಿರ್ದೇಶಿಸಿದ ಹಾಗು ಕಮಲ್ ಜೈನ್ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದ ಚಿತ್ರ ಇದಾಗಿದೆ.
 
ಬಹು ನಿರೀಕ್ಷಿತ ಜೀವನಚರಿತ್ರೆಯ ಚಿತ್ರವು ಝಾನ್ಸಿಯ ರಾಣಿ, ರಾಣಿ ಲಕ್ಷ್ಮೀಬಾಯಿಯ ಜೀವನವನ್ನು ಮತ್ತು 1857 ರ ಭಾರತೀಯ ಬಂಡಾಯದ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿರುದ್ಧವಾಗಿ ನಡೆದ ಯುದ್ಧದ ಮೇಲೆ ಆಧಾರಿತವಾಗಿದೆ.
 
ಈ ಚಿತ್ರದಲ್ಲಿ ಸೋನು ಸೂದ್ ಮತ್ತು ಅಂಕಿತ ಲೋಖಾಂಡೆ ಅವರು ಕೂಡಾ ಕಾಣಿಸಿಕೊಂಡಿದ್ದು, ಈ ಚಿತ್ರವು ಏಪ್ರಿಲ್ 27, 2018 ರಂದು ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಕೈ ಮುಗಿದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಯೇನು ಗೊತ್ತಾ?!