Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಕೈ ಮುಗಿದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಯೇನು ಗೊತ್ತಾ?!

webdunia
ಮಂಗಳವಾರ, 6 ಫೆಬ್ರವರಿ 2018 (16:19 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಇದೀಗ ದರ್ಶನ್ ತಮ್ಮೆಲ್ಲಾ ಅಭಿಮಾನಿಗಳಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಏನಂಥ? ಈ ಸುದ್ದಿ ಓದಿ.
 

ಸ್ಟಾರ್ ನಟನ ಹುಟ್ಟುಹಬ್ಬವೆಂದರೆ ಅಭಿಮಾನಿಗಳು ಅವರ ಮನೆ ಎದುರು ನಿಂತು ವಿಶ್ ಮಾಡಲು ಕಾಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅಕ್ಕಪಕ್ಕದವರಿಗೂ ಕಿರಿ ಕಿರಿ ಮಾಡುತ್ತಾರೆ. ಇನ್ನು ಮುಂದೆ ಹಾಗೆಲ್ಲಾ ಮಾಡಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

webdunia
‘ನನ್ನ ಹುಟ್ಟುಹಬ್ಬ ದಿನ ನೀವೆಲ್ಲಾ ದೂರದೂರದ ಊರಿನಿಂದ ಬಂದು ನಿಮ್ಮದೇ ಹುಟ್ಟುಹಬ್ಬ ಎಂಬಂತೆ ಸಂಭ್ರಮಿಸುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲವೆಂದೇ ಭಾವಿಸುತ್ತೇನೆ. ಆದರೆ ಈ ರೀತಿಯ ಸಂಭ್ರಮಾಚರಣೆ ಸಂದರ್ಭದಲ್ಲಿ ದಯವಿಟ್ಟು ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕಾಗಿ ನಿಮ್ಮೆಲ್ಲರಲ್ಲಿ ಕೈ ಮುಗಿದು ವಿನಂತಿಸುತ್ತೇನೆ. ಅಕ್ಕಪಕ್ಕದ ಮನೆಯ ಕಂಪೌಂಡ್ ಹತ್ತುವುದು, ಹೂ ಕುಂಡಗಳಿಗೆ ಹಾನಿ ಮಾಡಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia Hindi

ಮುಂದಿನ ಸುದ್ದಿ

ಸಲ್ಮಾನ್‌ಖಾನ್‌ಗೆ ಕೊನೆಗೂ ಪ್ರೀತಿಯ ಯುವತಿ ಸಿಕ್ಕಿದ್ದಾಳಂತೆ...!