Select Your Language

Notifications

webdunia
webdunia
webdunia
webdunia

ರಷ್ಯಾದ ಯುವಕನೊಂದಿಗೆ ಹಾಟ್ ನಟಿ ಶ್ರೇಯಾ ಶರಣ್ ಮದುವೆ..!?

ರಷ್ಯಾದ ಯುವಕನೊಂದಿಗೆ ಹಾಟ್ ನಟಿ ಶ್ರೇಯಾ ಶರಣ್ ಮದುವೆ..!?

ನಾಗಶ್ರೀ ಭಟ್

ಬೆಂಗಳೂರು , ಮಂಗಳವಾರ, 6 ಫೆಬ್ರವರಿ 2018 (18:14 IST)
ಹೌದು, ಹೀಗೊಂದು ಸುದ್ದಿ ಈಗ ಎಲ್ಲೆಡೆ ಹರಡುತ್ತಿದೆ. ನಾವೀಗ 2018 ರಲ್ಲಿ ಇನ್ನಷ್ಟು ಸೆಲೆಬ್ರಿಟಿ ಮದುವೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. 2017 ರ ಅಂತ್ಯದಲ್ಲಿ ಪ್ರಸಿದ್ಧ ಕ್ರಿಕೆಟ್ ಆಟಗಾರ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ಅದ್ಧೂರಿ ಡೆಸ್ಟಿನೇಶನ್ ವಿವಾಹವು ಬಹಳ ದೊಡ್ಡ ಸುದ್ದಿಯಾಗಿತ್ತು. ಈಗ ಸೋನಮ್ ಕಪೂರ್ ಸಹ ಅವರ ಹಾದಿಯನ್ನೇ ಹಿಡಿಯುವ ಸಾಧ್ಯತೆಗಳಿವೆ.
ಮೂಲವೊಂದರ ಪ್ರಕಾರ ಸಧ್ಯದಲ್ಲೇ ಇನ್ನೊಂದು ಅದ್ಧೂರಿಯಾದ ಡೆಸ್ಟಿನೇಶನ್ ವಿವಾಹ ನಡೆಯುವ ಎಲ್ಲಾ ಸಾಧ್ಯತೆಗಳೂ ಇದೆ. ತೆಲುಗು ಮತ್ತು ತಮಿಳಿನ ಪ್ರಖ್ಯಾತ ನಟಿ ಶ್ರೇಯಾ ಶರಣ್ ತಮ್ಮ ರಷ್ಯನ್ ಗೆಳೆಯನ ಜೊತೆ ಇದೇ ವರ್ಷ ಮಾರ್ಚ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಜೋಡಿ ಸಧ್ಯದಲ್ಲೇ ಮೀಟ್ ಮಾಡಿದ್ದು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
 
ವರದಿಗಳು ಹೇಳುವ ಪ್ರಕಾರ ಶ್ರೇಯಾ ಈಗ ರಷ್ಯಾಕ್ಕೆ ತಮ್ಮ ಗೆಳೆಯನ ಪಾಲಕರನ್ನು ಭೇಟಿಯಾಗಲು ತೆರಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಜೋಡಿ ರಾಜಸ್ಧಾನದಲ್ಲಿ ಡೆಸ್ಟಿನೇಶನ್ ವಿವಾಹ ಮಾಡಿಕೊಳ್ಳಲಿದ್ದಾರೆ. ಇನ್ನು ಇದರ ಕುರಿತು ಹೆಚ್ಚಿನ ಮಾಹಿತಿಗಳು ಅವರು ತಮ್ಮ ವಿವಾಹವನ್ನು ಅಧಿಕೃತವಾಗಿ ಘೋಷಿಸಿದ ಮೇಲಷ್ಟೇ ತಿಳಿಯಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 2019 ರೊಳಗೆ ಕಂಗನಾ ರಾನೌತ್ ಮದುವೆಯಾಗಲಿದ್ದಾರಂತೆ