ಸನ್ನಿ ಲಿಯೋನ್ ತಮ್ಮದೇ ಕಾಸ್ಮೆಟಿಕ್ ಬ್ರ್ಯಾಂಡ್ ಸ್ಥಾಪಿಸುತ್ತಿದ್ದಾರಂತೆ..!?

ನಾಗಶ್ರೀ ಭಟ್
ಸೋಮವಾರ, 12 ಫೆಬ್ರವರಿ 2018 (17:14 IST)
ಸನ್ನಿ ಲಿಯೋನ್ ತಮ್ಮ ಸ್ಟಾರ್‌ಸ್ಟ್ರಕ್ ಎನ್ನುವ ಕಾಸ್ಮೆಟಿಕ್ ಬ್ರ್ಯಾಂಡ್ ಶಿಘ್ರದಲ್ಲೇ ಬರಲಿದೆ ಮತ್ತು ಅದು ಗುಣಮಟ್ಟದಲ್ಲಿ ಮತ್ತು ಬಾಳಿಕೆಯಲ್ಲಿ ಉತ್ತಮವಾಗಿರಲಿದೆ ಎಂದು ಹೇಳಿಕೊಂಡಿದ್ದಾರೆ.

"ಇದು ನಾನು ಬಹಳ ಸಮಯದಿಂದ ಬಯಸಿರುವುದಾಗಿದೆ. ಸ್ಟಾರ್‌ಸ್ಟ್ರಕ್ ಅನ್ನು ಪ್ರಾರಂಭಿಸಲು ತುಂಬಾ ಪ್ರಯತ್ನ ಪಟ್ಟಿದ್ದೇನೆ, ಕಾಳಜಿ ವಹಿಸಿದ್ದೇನೆ. ಈಗ ಇದು ಮುಗಿಯುವ ಹಂತಕ್ಕೆ ಬಂದಿದೆ ಮತ್ತು ಸದ್ಯದಲ್ಲೇ ಗ್ರಾಹಕರನ್ನು ತಲುಪಲಿದೆ" ಎಂದು ಸನ್ನಿ ಲಿಯೋನ್ ತಮ್ಮ ಸಂತೋಷವನ್ನು ಹಂಚಿಕೊಂಡರು.
 
ಸನ್ನಿ ಲಿಯೋನ್ ನಿಜವಾದ ಹೆಸರು ಕರೆನ್ಜಿತ್ ಕೈರ್ ವೊಹ್ರಾ ಆಗಿದ್ದು ಇವರು ವಿದೇಶದಲ್ಲಿ ವಯಸ್ಕ ಚಲನಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿದ ನಂತರ ಬಾಲಿವುಡ್‌ನಲ್ಲಿ ನಟಿಸಿ ತಮ್ಮ ಮಾದಕ ಸೌಂದರ್ಯದಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಸನ್ನಿ ಲಿಯೋನ್ ಬಿಗ್‌ ಬಾಸ್ ಹಿಂದಿನ ಸೀಸನ್‌ನಲ್ಲಿ ಕಾಣಿಸಿಕೊಂಡರು. ಸನ್ನಿ ಲಿಯೋನ್ ಈಗಾಗಲೇ 'ಜಿಸ್ಮ್-2', 'ಏಕ್ ಪಹೆಲಿ ಲೀಲಾ', 'ಕುಚ್ ಕುಚ್ ಲೋಚಾ ಹೈ' ಮತ್ತು 'ಒನ್ ನೈಟ್ ಸ್ಟ್ಯಾಂಡ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 
ಸನ್ನಿ ನಾನು ಧರಿಸಲು ಮತ್ತು ಬಳಸಲು ಇಷ್ಟಪಡುವ ವಸ್ತುಗಳನ್ನು ತಯಾರಿಸುವ ಲೈನ್ ಅನ್ನು ಆರಿಸಿಕೊಂಡಿದ್ದೇನೆ. ಈ ಬ್ರ್ಯಾಂಡ್ ಯಾವ ಯಾವ ಸೌಂದರ್ಯವರ್ಧಕಗಳನ್ನು ಒಳಗೊಂಡಿರಲಿದೆ ಎನ್ನುವುದು ಮಾರ್ಚ್ 1 ರಂದು ಹೊರಬರುತ್ತದೆ ಎಂದು ಹೇಳಿದರು. ತಮ್ಮ ಮಾತನ್ನು ಮುಂದುವರಿಸುತ್ತಾ "ನಾನು ಕ್ಯಾಮರಾ ಮುಂದೆ ಹಲವು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ಆದ್ದರಿಂದ ನಾನು ಉತ್ತಮ ಗುಣಮಟ್ಟದ ಹಾಗೂ ದೀರ್ಘಕಾಲ ಬಾಳಿಕೆಬರುವ ಉತ್ಪನ್ನಗಳನ್ನು ಸೃಷ್ಟಿಸುತ್ತೇನೆ" ಎಂದು ಹೇಳಿದರು.
 
"ಮುಖ್ಯಮಹಿಳೆಯರಿಗೆ ಲಿಪ್‌ಸ್ಟಿಕ್‌ಗಳು, ಲಿಪ್ ಲೈನರ್ ಮತ್ತು ಲಿಪ್ ಗ್ಲೊಸ್‌ಗಳನ್ನು ಬಳಸುವಾಗ ಅದು ಅವರ ಪ್ರಪಂಚವಾಗಿರುವ ಕಾರಣ ನನಗೆ ಉತ್ಪನ್ನದ ವಿನ್ಯಾಸ, ಅದರ ಹೊಳಪು ಮತ್ತು ಅದರ ಪ್ರಕಾರ ಬಹಳ ಮುಖ್ಯವಾಗುತ್ತದೆ. ನಾನು ತಯಾರಿಸುವ ಎಲ್ಲಾ ಉತ್ಪನ್ನಗಳು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿದೆ ಮತ್ತು ಯಾವುದೇ ಪ್ರಾಣಿಗಳ ಮೇಲೆ ಪರೀಕ್ಷಿಸಲ್ಪಟ್ಟಿಲ್ಲ. ಸ್ಟಾರ್‌ಸ್ಟ್ರಕ್‌ನ ಯಾವುದೇ ಉತ್ಪನ್ನಗಳನ್ನು ಎಲ್ಲಾ ಮಹಿಳೆಯರೂ ಬಳಸಬಹುದು ಏಕೆಂದರೆ ಎಲ್ಲಾ ಉತ್ಪನ್ನದ ಬಣ್ಣಗಳನ್ನು ನಾನೇ ಆರಿಸಿದ್ದು ಅವು ಯಾವುದೇ ಚರ್ಮದ ಪ್ರಕಾರ ಮತ್ತು ಬಣ್ಣಕ್ಕೆ ಚೆನ್ನಾಗಿ ಹೊಂದುತ್ತದೆ" ಎಂದು ತಮ್ಮ ಉತ್ಪನ್ನಗಳ ಕುರಿತು ವಿವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ