ಬೆಂಗಳೂರಿಗೆ ಬರೋದೇ ಇಲ್ಲ ಅಂದ್ಳು ಹಾಟ್ ತಾರೆ ಸನ್ನಿ ಲಿಯೋನ್

ಬುಧವಾರ, 20 ಡಿಸೆಂಬರ್ 2017 (10:50 IST)
ಮುಂಬೈ: ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಬೆಂಗಳೂರಿಗೆ ಕರೆತರಲು ಖಾಸಗಿ ಸಂಸ್ಥೆಯೊಂದು ಸರ್ಕಾರ, ಪೊಲೀಸರೊಂದಿಗೆ ಗುದ್ದಾಟ ನಡೆಸುತ್ತಿದ್ದರೆ ಸ್ವತಃ ಹಾಟ್ ತಾರೆ ನಾನು ಬೆಂಗಳೂರಿಗೆ ಬರಲ್ಲ ಎಂದಿದ್ದಾರೆ.
 

ಸನ್ನಿ ಲಿಯೋನ್ ಬೆಂಗಳೂರಿಗೆ ಬಂದರೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೊಲೀಸರು ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಈ ಮೊದಲು ಸ್ಪಷ್ಟಪಡಿಸಿದ್ದರು. ಸರ್ಕಾರದ ನಿರ್ಧಾರದ ವಿರುದ್ಧ ಕಾರ್ಯಕ್ರಮ ಆಯೋಜಕರು ಹೈಕೋರ್ಟ್ ಮೊರೆ ಹೋಗಿದ್ದರು.

ಆದರೆ ಇದೆಲ್ಲಾ ರಗಳೆ ನೋಡಿದ ಸನ್ನಿ, ಜನರ ಸುರಕ್ಷತೆ ಮೊದಲು ಮುಖ್ಯ. ಬೆಂಗಳೂರು ಪೊಲೀಸರೇ ಭದ್ರತೆ ಬಗ್ಗೆ ಭರವಸೆ ಕೊಡಲು ಸಾಧ್ಯವಿಲ್ಲ ಎಂದ ಮೇಲೆ ನಾನು ಬರುವುದಿಲ್ಲ ಎಂದು ಟ್ವಿಟರ್ ಮೂಲಕ ನೀಲಿತಾರೆ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಕ್ಕಳಿಸುವುದು ತಪ್ಪಾ? ರಾಣಿ ಮುಖರ್ಜಿಯ ಹೊಸ ಸಿನಿಮಾ ಟ್ರೇಲರ್ ನಲ್ಲಿದೆ ಸಸ್ಪೆನ್ಸ್! (ವಿಡಿಯೋ)