Select Your Language

Notifications

webdunia
webdunia
webdunia
webdunia

ಮೀನಾಕುಮಾರಿ ಪಾತ್ರಕ್ಕೆ ಓಕೆ ಎಂದ ಸನ್ನಿ ಲಿಯೋನ್

ಮೀನಾಕುಮಾರಿ ಪಾತ್ರಕ್ಕೆ ಓಕೆ ಎಂದ ಸನ್ನಿ ಲಿಯೋನ್
ಮುಂಬೈ , ಶನಿವಾರ, 16 ಡಿಸೆಂಬರ್ 2017 (07:26 IST)
ಮುಂಬೈ: ಜನಪ್ರಿಯತೆಯ ತುತ್ತ ತುದಿಗೇರಿ, ಭಗ್ನ ಪ್ರೇಮದಿಂದಾಗಿ ಮದ್ಯಪಾನಕ್ಕೆ ದಾಸಳಾದ ಮೇರು ನಟಿ ಮೀನಾಕುಮಾರಿ ಅವರ  ಜೀವನಕಥೆಯನ್ನಾಧರಿತ ಚಿತ್ರವನ್ನು ನಿರ್ದೇಶಕ ಕರಣ್ ರಝ್ದಿನ್ ಮಾಡಲು ಹೊರಟ್ಟಿದ್ದು,ಆದರೆ ಈ ಚಿತ್ರದಲ್ಲಿ ಮೀನಾಕುಮಾರಿಯವರ ಪಾತ್ರಕ್ಕೆ ಸರಿಯಾದ ನಟಿಯನ್ನು ಹುಡುಕುವುದೇ ನಿರ್ದೇಶಕರಿಗೆ ಒಂದು ಸಮಸ್ಯೆಯಾಗಿತ್ತಂತೆ.


ಬಾಲಿವುಡ್ ನ ಜನಪ್ರಿಯ ನಟಿ ವಿದ್ಯಾಬಾಲನ್ ಅವರಿಗೆ ಈ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡರೆ ಮೀನಾಕುಮಾರಿಯವರದ್ದು ಗಂಭೀರ ಪಾತ್ರ ತಾನು ಗಂಭೀರತೆ ಇರದ ಪಾತ್ರವನ್ನು ಆಯ್ದುಕೊಳ್ಳುತ್ತಿದ್ದು, ಈ ಪಾತ್ರದಲ್ಲಿ ನಟಿಸಲು ಆಗುವುದಿಲ್ಲ ಎಂದು ಹೇಳಿದರು. ನಂತರ ಕರಣ್ ಅವರು ಮಾಧುರಿ ದೀಕ್ಷಿತ್ ಅವರಲ್ಲಿ ನಟಿಸುವಂತೆ ಕೇಳಿಕೊಂಡಾಗ ಅವರು ಕೂಡ ಉತ್ಸಾಹ ತೋರಿಸಲಿಲ್ಲ.


ನಂತರ ಅವರು ಬಾಲಿವುಡ್ ನ ಗ್ಲಾಮರ್ ನಟಿ ಸನ್ನಿಲಿಯೋನ್ ಅವರಿಗೆ ಹೇಳಿದಾಗ ಅವರು ಈ ಪಾತ್ರದಲ್ಲಿ ನಟಿಸಲು ಆಸಕ್ತಿ ತೋರಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆಗೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕಿಲ್ಲ ಅನುಮತಿ