ರವಿ ಬೆಳಗೆರೆ ಕನ್ನಡ ಪತ್ರಿಕೋದ್ಯಮದ ಸನ್ನಿ ಲಿಯೋನ್: ಅಗ್ನಿ ಶ್ರೀಧರ್

ಸೋಮವಾರ, 11 ಡಿಸೆಂಬರ್ 2017 (17:13 IST)
ಸುಪಾರಿ ನೀಡಿದ ಆರೋಪದ ಮೇಲೆ ಪರಪ್ಪನ ಜೈಲಿನಲ್ಲಿರುವ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕನ್ನಡ ಪತ್ರಿಕೊದ್ಯಮದ ಸನ್ನಿ ಲಿಯೋನ್‌ನಂತೆ ಎಂದು ಮತ್ತೊಬ್ಬ ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಹೇಳಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕೊದ್ಯಮದಲ್ಲಿ ಸೆಕ್ಸ್ ಮತ್ತು ಕ್ರೈಮ್‌ ಬಗ್ಗೆ ಜನತೆಗೆ ತುಂಬಾ ಆಸಕ್ತಿಯಿದೆ. ಅದನ್ನೇ ಬಂಡವಾಳ ಮಾಡಿಕೊಂಡ ರವಿ ಬೆಳಗೆರೆ ಉತ್ತಂಗಕ್ಕೆ ಏರಿದರು ಎಂದು ತಿಳಿಸಿದ್ದಾರೆ.
 
ಕನ್ನಡ ಪತ್ರಿಕೋದ್ಯಮದ ನೀತಿಗಳನ್ನು ತೊರೆದು ತನ್ನದೇ ಆದ ದಾರಿಯಲ್ಲಿ ಸಾಗುತ್ತಿದ್ದರಿಂದ ಬೆಳೆಗೆರೆಯೊಂದಿಗೆ ನನ್ನ ಸಂಬಂಧಗಳು ಚೆನ್ನಾಗಿರಲಿಲ್ಲ. ಇವತ್ತೂ ನಮ್ಮಿಬ್ಬರ ನಡುವೆ ಕಂದಕವಿದೆ ಎಂದು ಹೇಳಿದ್ದಾರೆ.
 
ಭೂಗತಲೋಕದೊಂದಿಗೆ ಸಂಪರ್ಕ ಬೆಳೆಸಿ ತಾನು ಸಾಗಿದ್ದೆ ದಾರಿ ಎನ್ನುವಂತೆ ರವಿ ಬೆಳಗೆರೆ ಸಾಗಿದ್ದ ಎಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿಗೆ ಅಮಿತ್ ಶಾ ಕಂಡ್ರೆ ಭಯ: ರಾಹುಲ್ ಗಾಂಧಿ