Publish Date: Mon, 11 Dec 2017 (12:35 IST)
Updated Date: Mon, 11 Dec 2017 (12:39 IST)
ಬೆಂಗಳೂರು ಪತ್ರಕರ್ತ ಸುನಿಲ್ ಹೆಗ್ಗರವಳ್ಲಿ ಕೊಲೆಗೆ ಸುಪಾರಿ ಪ್ರಕರಣ ಹಿನ್ನೆಲೆ ಸಿಸಿಬಿ ವಶದಲ್ಲಿರುವ ರವಿಬೆಳಗೆರೆಯನ್ನು ಇಂದು ಕೋರ್ಟ್ ಮುಂದೆ ಹಾಜುರುಪಡಿಸಲಾಗಿತ್ತು. ಆದರೆ ಇನ್ನೇನು ವಿಚಾರಣೆ ಆರಂಭವಾಗಲಿದೆ ಎಂದು ಎಲ್ಲರೂ ಕುತೂಹಲದಿಂದಿರುವಾಗಲೇ ಕೋರ್ಟ್ ಮತ್ತೊಂದು ಶಾಕಿಂಗ್ ಸುದ್ದಿಯನ್ನು ನೀಡಿದೆ.
ಪತ್ರಕರ್ತ ರವಿ ಬೆಳಗೆರೆ ವಿಚಾರಣೆಯನ್ನು ಮಧ್ಯಾಹ್ನ ಒಂದು ಗಂಟೆಗೆ ಮುಂದೂಡಬೇಕು ಎಂದು 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಜಗದೀಶ್ ಆದೇಶ ನೀಡಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ರವಿ ಬೆಳಗೆರಯ ವಿಚಾರಣೆ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ