Publish Date: Mon, 11 Dec 2017 (11:06 IST)
Updated Date: Mon, 11 Dec 2017 (11:08 IST)
ಬೆಂಗಳೂರು: ಕೊಲೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ಪತ್ರಕರ್ತ ರವಿ ಬೆಳಗೆರೆ ಸಿಗರೇಟ್ ಚಟ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಸಿಗರೇಟ್ ಕೊಡಿ ಎಂದು ರವಿ ಬೆಳಗೆರೆ ನಿನ್ನೆ ಪೊಲೀಸರ ಮೇಲೆ ಮೊಂಡು ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪೊಲೀಸರು ರವಿ ಬೆಳಗೆರೆಗೆ ಸಿಗರೇಟ್ ಸೇದಲು ಅವಕಾಶ ನೀಡಿದ್ದಾರೆಂಬ ಮಾಧ್ಯಮ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸಿಗರೇಟ್ ನೀಡಲಿಲ್ಲ.
ನಿನ್ನೆಯಿಂದ ಸಿಗರೇಟ್ ಸೇದಲು ಅವಕಾಶ ಕೊಟ್ಟಿಲ್ಲ. ಸಿಗರೇಟ್ ಗೆ ಅಡಿಕ್ಟ್ ಆಗಿದ್ದ ರವಿ ಬೆಳಗೆರೆ ಸಿಗರೇಟ್ ಸಿಕ್ಕರಷ್ಟೇ ಪ್ರಶ್ನೆಗೆ ಉತ್ತರಿಸುವೆ ಎಂದು ಮೊಂಡು ಹಠ ಮಾಡುತ್ತಿದ್ದರಂತೆ. ಆದರೆ ಪೊಲೀಸರು ಇದೀಗ ಸಿಗರೇಟ್ ಕೊಡದೇ ಇರುವುದರಿಂದ ರಾತ್ರಿಯಿಡೀ ರವಿ ಬೆಳಗೆರೆ ಚಡಪಡಿಸುತ್ತಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ