Publish Date: Mon, 11 Dec 2017 (06:54 IST)
Updated Date: Mon, 11 Dec 2017 (06:59 IST)
ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದ ಹಿನ್ನೆಲೆ ಇಂದು ರವಿ ಬೆಳೆಗರೆ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ, ರವಿಬೆಳಗೆರೆಯನ್ನು ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರು ಪಡಿಸಲಿದ್ದಾರೆ.
1ನೇ ಎಸಿಎಂಎಂ ಕೋರ್ಟ್ ಗೆ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಎಸಿಪಿ ನೇತೃತ್ವದಲ್ಲಿ ನ್ಯಾಯಾಧೀಶ ಜಗದೀಶರ ಮುಂದೆ ರವಿಬೆಳಗೆರೆಯನ್ನು ಹಾಜರುಪಡಿಸಲಾಗುವುದು.
ತನಿಖೆ ವೇಳೆ ರವಿ ಬೆಳಗೆರೆ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆ, ಅವರ ಕಸ್ಟಡಿ ಮುಂದುವರಿಸುವಂತೆ ಸಿಸಿಬಿ ಪೊಲೀಸರು ಕಾಲಾವಕಾಶ ಕೋರಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ