Select Your Language

Notifications

webdunia
webdunia
webdunia
webdunia

ಅಮಿತಾಭ್ ಬಚ್ಚನ್ ಅಂಗರಕ್ಷಕನ ವರ್ಗಾವಣೆ ಹಿಂದಿರುವ ಅಸಲಿ ಕಾರಣವೇನು ಗೊತ್ತೇ?

ಅಮಿತಾಭ್ ಬಚ್ಚನ್ ಅಂಗರಕ್ಷಕನ ವರ್ಗಾವಣೆ ಹಿಂದಿರುವ ಅಸಲಿ ಕಾರಣವೇನು ಗೊತ್ತೇ?
ನವದೆಹಲಿ , ಶನಿವಾರ, 28 ಆಗಸ್ಟ್ 2021 (14:17 IST)
ಬಾಲಿವುಡ್ ನ ಸ್ಟಾರ್ ನಟರು ತಮ್ಮ ಸುರಕ್ಷತೆಗಾಗಿ ಪೊಲೀಸರಿಂದ ಭದ್ರತೆಯನ್ನು ಒದಗಿಸುವಂತೆ ಮನವಿ ಮಾಡಿಕೊಳ್ಳುವುದು ಮತ್ತು ಸುರಕ್ಷತೆಗಾಗಿ ಪೊಲೀಸರನ್ನು ನಿಯೋಜಿಸುವುದು ಸಾಮಾನ್ಯ ವಿಷಯ. ಹೀಗೆ ದೊಡ್ಡ ನಟರಿಗೆ ಅಂಗರಕ್ಷಕನಾಗಿ ಕಾರ್ಯ ನಿರ್ವಹಿಸಿದರೆ ಸ್ವಲ್ಪ ಕಾಸು ಜಾಸ್ತಿ ಸಿಗುತ್ತದೆ ಎಂದು ಸಾಮಾನ್ಯವಾಗಿ ಎಲ್ಲರ ಅಭಿಪ್ರಾಯ.

ಆದರೆ ಇಲ್ಲಿ ತುಂಬಾ ಕಾಸು ಮಾಡಿರುವ ವಿಚಾರವು ಎಷ್ಟರ ಮಟ್ಟಿಗೆ ನಿಜವೂ ಗೊತ್ತಿಲ್ಲ. ಆದರೆ ,ಅಂಗರಕ್ಷಕರನ್ನು ತುಂಬಾ ಸಮಯದವರೆಗೆ ಒಂದೇ ಕಡೆ ಕೆಲಸ ಮಾಡಲು ಪೊಲೀಸ್ ಇಲಾಖೆ ಕೊಡುವುದಿಲ್ಲ. ಹೀಗಾಗಿ ಸ್ಟಾರ್ ನಟರ ಮನೆಗಳಿಂದ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತದೆಯಂತೆ. ಈಗ ಅಮಿತಾಭ್ ಬಚ್ಚನ್ ಅವರ ಅಂಗರಕ್ಷಕನ ವರ್ಗಾವಣೆ ವಿಷಯ ಸಖತ್ ಸದ್ದು ಮಾಡುತ್ತಿದೆ.
ಬಾಲಿವುಡ್ನಲ್ಲಿ ಬಿಗ್ ಬಿ ಎಂದೇ ಖ್ಯಾತಿ ಪಡೆದಿರುವ ಅಮಿತಾಭ್ ಬಚ್ಚನ್ ಅವರ ಭದ್ರತೆಗಾಗಿ ಪೊಲೀಸ್ ಅಂಗರಕ್ಷಕರನ್ನು ನಿಯೋಜಿಸಲಾಗಿದೆ.  2015ರಿಂದ ಅಂಗರಕ್ಷಕರಲ್ಲಿ ಒಬ್ಬರಾದ ಜಿತೇಂದ್ರ ಶಿಂಧೆ ಅವರು ಅಮಿತಾಭ್ ಅವರ ಬಳಿಯೇ ಕೆಲಸ ಮಾಡುತ್ತಿದ್ದಾರೆ. ಅವರನ್ನು ಈಗ ಇದ್ದಕಿದ್ದಂತೆ ಬೇರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಒಂದು ಸುದ್ದಿ ಮಾಧ್ಯಮದ ಪ್ರಕಾರ ಅಮಿತಾಭ್ ಅವರ ಪೊಲೀಸ್ ಅಂಗರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಿತೇಂದ್ರ ಅವರು ಒಂದು ವರ್ಷಕ್ಕೆ ಸುಮಾರು 1.5 ಕೋಟಿ ರೂಪಾಯಿಯನ್ನು ಸಂಪಾದಿಸುತ್ತಿದ್ದಾರೆ ಎನ್ನುವ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಶುರುವಾಯಿತು. ಆಗ ಮುಂಬೈ ಪೊಲೀಸ್ ಇಲಾಖೆಯವರು ಎಚ್ಚೆತ್ತುಕೊಂಡು ಅವರಿಗೆ ಮುಂಬೈನ ದಕ್ಷಿಣ ಭಾಗದ ಪೊಲೀಸ್ ಸ್ಟೇಷನ್ಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹಲವಾರು ವರ್ಷಗಳಿಂದ ಶಿಂಧೆ ಅವರು ಅಮಿತಾಭ್ ಅವರು ಮನೆಯ ಹೊರಗೆ ಕಾಲಿಟ್ಟರೆ ಸಾಕು ಅವರ ನೆರಳಂತೆ ಅವರ ಜೊತೆಯಲ್ಲಿಯೇ ಇರುತ್ತಿದ್ದರು ಎಂದು ಹೇಳಲಾಗಿದೆ.  ಈ ವರದಿಗಳನ್ನು ಆನ್ಲೈನ್ನಲ್ಲಿ ನೋಡಿದ್ದೆ, ಮುಂಬೈ ಪೊಲೀಸ್ ಇಲಾಖೆ ಶಿಂಧೆ ಅವರು ಸ್ವತಃ ಈ ಹಣವನ್ನು ಅಮಿತಾಭ್ ಅವರಿಂದ ಪಡೆದಿದ್ದಾರೆಯೇ ಅಥವಾ ಬೇರೆ ಜನರಿಂದ ಪಡೆದಿದ್ದಾರೆ ಎಂದು ತಿಳಿದುಕೊಳ್ಳಲು ತನಿಖೆಗೆ ಆದೇಶ ನೀಡಿದೆಯಂತೆ.
ಒಂದು ಸುದ್ದಿ ಮಾಧ್ಯಮದ ಪ್ರಕಾರ ಜಿತೇಂದ್ರ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಒಂದು ಹೆಸರಾಂತ ಸೆಲೆಬ್ರಿಟಿಗಳಿಗೆ ವೈಯಕ್ತಿಕ ಅಂಗರಕ್ಷಕರನ್ನು ಒದಗಿಸುವಂತಹ ಒಂದು ಭದ್ರತಾ ಸಂಸ್ಥೆ ನಡೆಸುತ್ತಿದ್ದಾರೆ. ಅಮಿತಾಭ್ಬಬಚ್ಚನ್ ಅವರು ತನಗೆ 1.5 ಕೋಟಿ ರೂಪಾಯಿ ಹಣವನ್ನು ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ತನಿಖೆಯ ವೇಳೆಯಲ್ಲಿ ತಿಳಿಸಿದ್ದಾರಂತೆ.
ಮುಂಬೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಒಬ್ಬ ಪೋಲಿಸ್ ಅಂಗರಕ್ಷಕನನ್ನು ಐದು ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ನಿಯೋಜಿಸಲಾಗುವುದಿಲ್ಲ. ಅಂತಹದರಲ್ಲಿ ಕಳೆದ ಆರು ವರ್ಷಗಳಿಂದ ಅಮಿತಾಭ್ ಬಚ್ಚನ್ ಅವರಿಗೆ ಪೊಲೀಸ್ ಅಂಗರಕ್ಷಕನಾಗಿ ಶಿಂಧೆ ಅವರು ಕೆಲಸ ಮಾಡುತ್ತಿದ್ದರು.
ಅಮಿತಾಭ್ ಅವರು ಎಕ್ಸ್ ಸೆಕ್ಯೂರಿಟಿಯನ್ನು ಹೊಂದಿದ್ದು, ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಅವರ ಜೊತೆಗೆ ಇರುತ್ತಾರೆ. ಅದರಲ್ಲಿ ಶಿಂಧೆ ಅವರು ಒಬ್ಬರಾಗಿದ್ದರು. ಅಮಿತಾಭ್ ಚಲನಚಿತ್ರದ ಚಿತ್ರೀಕರಣ ನಡೆಯುವಂತಹ ಸ್ಥಳದಿಂದ ಹಿಡಿದು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದರೂ ಅವರ ನೆರಳಿನಂತೆ ಜೊತೆಯಲ್ಲಿಯೇ ಇರುತ್ತಿದ್ದರು ಎಂದು ಹೇಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ಮೂವರು ನಟರ ಜತೆಗೆ ನಟಿಸುವುದು ಸಮಂತಾ ಅಕ್ಕಿನೇನಿಯ ಮಹದಾಸೆಯಂತೆ