ಮುಂಬೈ: ಪತಿ ರಾಜ್ ಕುಂದ್ರಾ ಬಂಧನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಪರೂಪವಾಗಿರುವ ನಟಿ ಶಿಲ್ಪಾ ಶೆಟ್ಟಿ ಈಗ ಸ್ಪೂರ್ತಿದಾಯಕ ಸಂದೇಶವೊಂದನ್ನು ಹಾಕಿಕೊಂಡಿದ್ದಾರೆ.
ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸೀರೆಯಲ್ಲಿರುವ ತಮ್ಮ ಫೋಟೋ ಹಾಕಿ ಶಿಲ್ಪಾ, ಏರಬೇಕೆಂದು ಮಹಿಳೆ ಮನಸ್ಸು ಮಾಡಿದರೆ ಆಕೆಯನ್ನು ಯಾರೂ ತಡೆಯಲಾಗದು ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ತಮ್ಮನ್ನು ಟಾರ್ಗೆಟ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ. ರಾಜ್ ಕುಂದ್ರಾ ಜೈಲಿನಲ್ಲಿರುವಾಗಲೇ ಶಿಲ್ಪಾ ರಿಯಾಲಿಟಿ ಶೋ ಶೂಟಿಂಗ್ ಗೆ ಹಾಜರಾಗಿದ್ದರು.