Select Your Language

Notifications

webdunia
webdunia
webdunia
webdunia

ಯಶ್ ಜೋಹರ್‌ಗೆ ರಾಖಿ ಕಟ್ಟಿ ರಕ್ಷಾಬಂಧನವನ್ನು ಆಚರಿಸಿದ ಆಲಿಯಾ ಭಟ್..

ಯಶ್ ಜೋಹರ್‌ಗೆ ರಾಖಿ ಕಟ್ಟಿ ರಕ್ಷಾಬಂಧನವನ್ನು ಆಚರಿಸಿದ ಆಲಿಯಾ ಭಟ್..
ಬೆಂಗಳೂರು , ಮಂಗಳವಾರ, 28 ಆಗಸ್ಟ್ 2018 (13:50 IST)
ಪ್ರಸ್ತುತ ಆಲಿಯಾ ಬ್ರಹ್ಮಾಸ್ತ್ರ ಹಾಗೂ ಕಲಂಕ್ ಈ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಎರಡೂ ಚಿತ್ರಗಳು ಧರ್ಮಾ ಪ್ರೊಡಕ್ಷನ್ಸ್ ಅವರದಾಗಿರುವುದು ವಿಶೇಷ. ಅದೇನೇ ಇದ್ದರೂ ತಮ್ಮ ಬ್ಯುಸಿ ವೇಳಾಪಟ್ಟಿಯಿಂದ ಸಮಯ ಮಾಡಿಕೊಂಡು ಕರಣ್ ಜೋಹರ್ ಅವರ ಮನೆಗೆ ತಮ್ಮ ಅಕ್ಕನ ಕರ್ತವ್ಯಗಳನ್ನು ನಿರ್ವಹಿಸಲು ಬಂದಿದ್ದಾರೆ. ಕರಣ್ ಜೋಹರ್ ತಮ್ಮ ಟ್ವಿಟ್ಟರ್ ನಲ್ಲಿ ಆಲಿಯಾ ಭಟ್ ಯಶ್ ಜೋಹರ್‌ಗೆ ರಾಖಿ ಕಟ್ಟುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಾರಾ ಅಲಿ ಖಾನ್, ತೈಮೂರ್, ಇನಾಯಾ ಅವರ ಮುದ್ದಾದ ರಕ್ಷಾಬಂಧನದ ಚಿತ್ರವನ್ನು ನೋಡಿ ಕಳೆದು ಹೋಗಿರುವವರಿಗೆ ಆಲಿಯಾ ಭಟ್ ಹಾಗೂ ಯಶ್ ಜೋಹರ್ ಚಿತ್ರ ಕಣ್ಣಿಗೆ ಹಬ್ಬವಾಗಲಿದೆ. ಈ ಚಿತ್ರದಲ್ಲಿ ಇಬ್ಬರೂ ಮುದ್ದಾಗಿ ಕಾಣುತ್ತಿದ್ದಾರೆ. ಕರಣ್ ಜೋಹರ್ ಫೋಟೋವನ್ನು "ದೊಡ್ಡಕ್ಕನ ಪ್ರೀತಿ, ಆಲಿಯಾ ಮತ್ತು ಯಶ್ #ರಕ್ಷಾಬಂಧನದ ಶುಭಾಷಯಗಳು" ಎಂದು ಹಂಚಿಕೊಂಡಿದ್ದಾರೆ. ಆಲಿಯಾ ಹಾಗೂ ಕರಣ್ ತುಂಬಾ ಸಮಯದಿಂದ ಆತ್ಮೀಯರಾಗಿದ್ದಾರೆ. ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದಿಂದ ಪ್ರಾರಂಭಿಸಿ ಇಲ್ಲಿಯವರೆಗೂ ಕರಣ್ ಆಲಿಯಾಗೆ ಜೀವನದ ಹಾಗೂ ವೃತ್ತಿ ಬದುಕಿನ ಸಲಹೆಗಳನ್ನು ನೀಡುವುದರಿಂದ ಹಿಡಿದು ಎಂದೂ ಆಲಿಯಾ ಭಟ್ ಅವರನ್ನು ಒಬ್ಬಂಟಿಯಾಗಿಸಿಲ್ಲ. ಆಲಿಯಾ ಕರಣ್ ಅವರನ್ನು ತಮ್ಮ ಗುರು, ಸ್ನೇಹಿತ ಮತ್ತು ತಂದೆಯಂತಹ ವ್ಯಕ್ತಿ ಎಂದು ಪರಿಗಣಿಸುತ್ತಾರೆ.
 
ಆಲಿಯಾ ಮುಂದೆ ಝೋಯಾ ಅಖ್ತರ್ ಅವರ ಗಲ್ಲಿ ಬಾಯ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಬಿಡುಗಡೆಯಾದ ಕೊನೆಯ ಚಿತ್ರ ರಾಝಿ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿದ್ದು 100 ಕೋಟಿ ರೂಪಾಯಿಗಳನ್ನು ಕಲೆಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಸೈ.ರಾ. ಚಿತ್ರದಲ್ಲಿ ಕಿಚ್ಚ ಸುದೀಪ್ ಪಾತ್ರವೇನು ಗೊತ್ತಾ?