Publish Date: Fri, 23 Feb 2018 (19:31 IST)
Updated Date: Fri, 23 Feb 2018 (19:34 IST)
ಪ್ರಸ್ತುತವಾಗಿ ತಮ್ಮ ಮೊದಲ ಹಂತದ ಚಿತ್ರೀಕರಣಕ್ಕಾಗಿ 'ಬ್ರಹ್ಮಾಸ್ತ್ರ' ತಂಡ ಬಲ್ಗೇರಿಯಾದಲ್ಲಿದೆ. ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರದ ಪ್ರಮುಖ ಪಾತ್ರಗಳಲ್ಲಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸೇರಿದಂತೆ ಪಾತ್ರವರ್ಗ ಮತ್ತು ಸಿಬ್ಬಂದಿಗಳು ಮೊದಲ ಹಂತದ ಶೂಟಿಂಗ್ ಅನ್ನು ತುಂಬಾ ಆನಂದಿಸಿದಂತೆ ತೋರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಆಲಿಯಾ ಮತ್ತು ರಣಬೀರ್ ತಮ್ಮ ತರಬೇತುದಾರ ಇಡೊ ಪೋರ್ಟಲ್ ಅವರ ಜೊತೆಗೆ ಗೂಫಿ ಮುಖವನ್ನು ಮಾಡಿದ ಫೋಟೋವೊಂದು ವೈರಲ್ ಆಗಿತ್ತು.
ಇದೀಗ ಇಡೊ ಪೋರ್ಟಲ್ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಅವನ್ನು ತಮ್ಮೊಂದಿಗೆ ಸೇರಿಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇಡೊ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ, ನಿರ್ದೇಶಕ ಅಯಾನ್ ಮುಖರ್ಜಿ ಮತ್ತು ಚಿತ್ರದ ಪ್ರಮುಖ ಪಾತ್ರದಲ್ಲಿರುವ ಆಲಿಯಾ ಹಾಗೂ ರಣಬೀರ್ ಕುರಿತು ತುಂಬಾ ಉದ್ದವಾದ ಸಂದೇಶದೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
'ಬ್ರಹ್ಮಾಸ್ತ್ರ' ಒಂದು ಸಾಹಸಮಯ ವೈಜ್ಞಾನಿಕ ಚಿತ್ರವಾಗಿದ್ದು, ರಣಬೀರ್ ಕಪೂರ್ ಸೂಪರ್‌ಹೀರೋ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಆಲಿಯಾ ಸಾಥ್ ನೀಡಲಿದ್ದಾರೆ. 100 ಕೋಟಿ ರೂಪಾಯಿಗಳ ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ತಯಾರಿಸಲಾಗುತ್ತಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌನಿ ರಾಯ್ ಮುಖ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದುಬಂದಿದೆ. ಕರಣ್ ಜೋಹರ್ ಈ ಚಿತ್ರದ ನಿರ್ಮಾಪಕರಾಗಿದ್ದು ಅವರ ಧರ್ಮಾ ಪ್ರೊಡಕ್ಷನ್‌ನಲ್ಲಿ 'ಬ್ರಹ್ಮಾಸ್ತ್ರ' ಮೂಡಿಬರಲಿದೆ. ಅಗಸ್ಟ್ 15, 2019 ರಂದು 'ಬ್ರಹ್ಮಾಸ್ತ್ರ' ತೆರೆಗೆ ಅಪ್ಪಳಿಸಲಿದ್ದು, ಸ್ವಾತಂತ್ರ್ಯೋತ್ಸವದ ವಾರದ ಕೊನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲಿದೆ.