Select Your Language

Notifications

webdunia
webdunia
webdunia
webdunia

ನಟಿ ಐಶ್ವರ್ಯಾ ರೈ ಬಚ್ಚನ್ ಡ್ರೆಸ್ ಇದೀಗ ವಿವಾದದಲ್ಲಿ!

ನಟಿ ಐಶ್ವರ್ಯಾ ರೈ ಬಚ್ಚನ್ ಡ್ರೆಸ್ ಇದೀಗ ವಿವಾದದಲ್ಲಿ!
ಮುಂಬೈ , ಮಂಗಳವಾರ, 28 ಮೇ 2019 (12:53 IST)
ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ  ರೈ ಬಚ್ಚನ್ ತಮ್ಮ ಡ್ರೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ಐಶ್ ಬೇಬಿ ಇದೀಗ ಉಡುಪಿನಿಂದಲೇ ವಿವಾದಕ್ಕೀಡಾಗಿದ್ದಾರೆ.


ಇತ್ತೀಚೆಗೆ ಕ್ಯಾನಸ್ ವೇದಿಕೆಯಲ್ಲಿ ಐಶ್ವರ್ಯಾ ತೊಟ್ಟಿದ್ದ ಉಡುಪೊಂದು ಥೇಟ್ ಸೋನಮ್ ಕಪೂರ್ ಹಿಂದೊಮ್ಮೆ ತೊಟ್ಟುಕೊಂಡಂತೆಯೇ ಇತ್ತು. ಇದನ್ನು ನೋಡಿ ನೆಟ್ಟಿಗರು ಇದು ಸೋನಮ್ ಸ್ಟೈಲ್ ನ ಕಾಪಿ ಮಾಡಿದ್ದು ಎಂದು ಲೇವಡಿ ಮಾಡಿದ್ದರು.

ಮತ್ತೆ ಕೆಲವರು ಐಶ್ವರ್ಯಾ ತಕ್ಷಣವೇ ತಮ್ಮ ಸ್ಟೈಲರ್ ಟೀಂ ಬದಲಾಯಿಸಬೇಕು ಎಂದು ಒತ್ತಾಯಗಳೂ ಕೇಳಿಬಂದಿದೆ. ಇದರ ನಡುವೆ ಇದೀಗ ಐಶ್ವರ್ಯಾ ಸ್ಟೈಲಿಶ್ ರಿಯಾನ್ನ್ ಮೊರಾಡಿಯನ್ ಐಶ್ವರ್ಯಾ ಪರವಾಗಿ ಬ್ಯಾಟ್ ಬೀಸಿದ್ದು ಇದು ಖಂಡಿತಾ ಸೋನಮ್ ಉಡುಪಿನ ನಕಲು ಅಲ್ಲ. ಸರಿಯಾಗಿ ನೋಡಿ ಆಮೇಲೆ ಕಾಮೆಂಟ್ ಮಾಡಿ ಎಂದು ತಿರುಗೇಟು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮದುವೆಯಲ್ಲಿ ರವಿಚಂದ್ರನ್ ಬಿಂದಾಸ್ ಸ್ಟೆಪ್