Publish Date: Fri, 24 Nov 2017 (07:16 IST)
Updated Date: Fri, 24 Nov 2017 (07:30 IST)
ಮುಂಬೈ: ಬಣ್ಣದ ಬದುಕಿನಾಚೆಗೂ ಸಲ್ಮಾನ್ ಖಾನ್ ಮತ್ತು ಕತ್ರಿನಾ ನಡುವೆ ಏನೋ ಇದೆ ಎಂದು ಗಾಸಿಪ್ ಪ್ರೀಯರು ಪಿಸುಗುಡುತ್ತಿದ್ದರು. ಆದರೆ ಕತ್ರಿನಾ ಮಾತ್ರ ಸಲ್ಮಾನ್ ತನ್ನ ಸ್ನೇಹಿತ ಅಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು.
ಸಾಕಷ್ಟು ಹಿಟ್ ಚಿತ್ರ ನೀಡಿದ ಈ ಜೋಡಿಗಳು ಒಂದಷ್ಟು ವರ್ಷ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಈಗ ಮತ್ತೆ ಟೈಗರ್ ಜಿಂದಾ ಹೈ ಚಿತ್ರದ ಮೂಲಕ ಇವರಿಬ್ಬರನ್ನು ಪ್ರೇಕ್ಷಕರು ಮತ್ತೆ ಕಣ್ತುಂಬಿಸಿಕೊಳ್ಳಬಹುದು.
ಕತ್ರಿನಾ ಮತ್ತು ಸಲ್ಮಾನ್ ಒಟ್ಟಾಗಿ ನಟಿಸಿದ ಟೈಗರ್ ಜಿಂದಾ ಹೈ ಚಿತ್ರ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ತೆರೆ ಕಾಣಲಿದೆಯಂತೆ. ಇನ್ನೂ ಒಂದು ವಿಶೇಷವೆನೆಂದರೆ ಈ ಚಿತ್ರದ ಹಾಡೊಂದರ ಚಿತ್ರೀಕರಣ ಆಸ್ಟ್ರೇಲಿಯಾದಲ್ಲಿ ನಡೆದಿದೆಯಂತೆ. ಇವರಿಬ್ಬರ ಜೋಡಿ ಈ ಹಾಡಿನಲ್ಲಿ ಮೋಡಿ ಮಾಡಲಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.