Select Your Language

Notifications

webdunia
webdunia
webdunia
webdunia

ಸಲ್ಮಾನ್‌ಖಾನ್‌ನಂತೆ ಚಿನ್ನದ ಬ್ರಾಸ್‌ಲೆಟ್ ಧರಿಸಿದ ವ್ಯಕ್ತಿಯೊಬ್ಬ ಏನು ಮಾಡಿದ ಗೊತ್ತಾ?

ಸಲ್ಮಾನ್‌ಖಾನ್‌ನಂತೆ ಚಿನ್ನದ ಬ್ರಾಸ್‌ಲೆಟ್ ಧರಿಸಿದ ವ್ಯಕ್ತಿಯೊಬ್ಬ ಏನು ಮಾಡಿದ ಗೊತ್ತಾ?
ಬೆಂಗಳೂರು , ಬುಧವಾರ, 15 ನವೆಂಬರ್ 2017 (17:53 IST)
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಧರಿಸಿರುವ ಬ್ರಾಸ್‌ಲೆಟ್‌ ಬೆಲ್ಟ್‌ ಮಾದರಿಯಲ್ಲಿಯೇ 29 ವರ್ಷದ ಪ್ರಯಾಣಿಕನೊಬ್ಬ ಧರಿಸಿ ಕಸ್ಟಮ್ಸ್ ಅಧಿಕಾರಿಗಳಿಗೆ ವಂಚಿಸುವ ಹುನ್ನಾರ ವಿಎಫಲವಾಗಿದೆ. 
 
ಕುವೈತ್‌ನಿಂದ ಬೆಂಗಳೂರಿಗೆ ತೆರಳುತ್ತಿರುವ ಪ್ರಯಾಣಿಕನನ್ನು ಬಂಧಿಸಿದ ವಿಮಾನ ನಿಲ್ದಾಣದ ಗುಪ್ತಚರ ದಳದ ಅಧಿಕಾರಿಗಳು ಆತನಿಂದ 285 ಗ್ರಾಂ ಭಾರದ 8.68 ಲಕ್ಷ ರೂ ಮೌಲ್ಯದ ಬ್ರಾಸ್‌ಲೆಟ್ ಮತ್ತು ಚಿನ್ನದ ಬೆಲ್ಟ್ ಬಕಲ್ ವಶಕ್ಕೆ ತೆಗೆದುಕೊಂಡಿದ್ದಾರೆ.
 
ಆಂಧ್ರಪ್ರದೇಶ ಮೂಲದ ನಸೀರುದ್ದೀನ್ ಶೇಖ್ ನವೆಂಬರ್ 12 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕ್ಕೆ ಕುವೈತ್ ಏರ್‌ವೇಸ್ ವಿಮಾನದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕಸ್ಟಮ್ಸ್ ಅಧಿಕಾರಿಗಳು ನಸೀರುದ್ದೀನ್ ಶೇಖ್ ವಿಚಾರಣೆ ನಡೆಸಿದಾಗ , ನಾನು ಸಲ್ಮಾನ್ ಖಾನ್ ಅಭಿಮಾನಿಯಾಗಿದ್ದು ಪಶ್ಚಿಮ ಏಷ್ಯಾದಿಂದ ಬ್ರಾಸ್‌ಲೆಟ್ ಮತ್ತು ಬೆಲ್ಟ್ ಬಕಲ್ ಖರೀದಿಸಿದ್ದೇನೆ ಎಂದು ತಿಳಿಸಿದ್ದಾನೆ. ನಂತರ ಚಿನ್ನದ ಬ್ರಾಸ್‌ಲೆಟ್ ಮತ್ತು ಬೆಲ್ಟ್ ಬಕಲ್‌ಗೆ ಬೆಳ್ಳಿಯ ಲೇಪನ ಹಾಕಿರುವುದು ಅಧಿಕಾರಿಗಳಿಗೆ ಗೊತ್ತಾಗಿದೆ. 
 
ಆರೋಪಿ ನಸೀರುದ್ದೀನ್‌ನನ್ನು ವಶಕ್ಕೆ ತೆಗೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್ ಸ್ಪರ್ಧಿ ಅರ್ಷಿಖಾನ್, ಶಿಲ್ಪಾ ಶಿಂಧೆ ಸೆಕ್ಸ್ ಸ್ಕ್ಯಾಂಡಲ್‌ಗಳು ಬಹಿರಂಗ