Publish Date: Fri, 10 Nov 2017 (08:18 IST)
Updated Date: Fri, 10 Nov 2017 (08:20 IST)
ಮುಂಬೈ: ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಈಗಲೂ ಯುವತಿಯರ ಫೇವರಿಟ್. ಈ ಎವರ್ ಗ್ರೀನ್ ಹೀರೋ ಕರೆದರೆ ನಾ ಬರದೇ ಇರಲಾರೆ ಎಂದಿದ್ದಾಳೆ ನಟಿ, ಮಾಡೆಲ್ ಝೋಯಾ ಅಫ್ರೋಝ್.
ಅಷ್ಟಕ್ಕೂ ಆಕೆ ಹೇಳಿದ್ದು ಬಿಗ್ ಬಾಸ್ ಕುರಿತು. ಬಿಗ್ ಬಾಸ್ ಹಿಂದಿ ಅವತರಣಿಕೆಯನ್ನು ನಿರೂಪಿಸುತ್ತಿರುವವರು ಸಲ್ಮಾನ್ ಖಾನ್. ಸಲ್ಮಾನ್ ವೈಯಕ್ತಿಕವಾಗಿ ಬಂದು ಕರೆದರೆ ಬಿಗ್ ಬಾಸ್ ಗೆ ಹೋಗಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಝೋಯಾ ಈ ಮೊದಲು ಸಲ್ಮಾನ್ ಜತೆ ಕೆಲಸ ಮಾಡಿದ್ದಾಳೆ. ಹೀಗಾಗಿ ಸಲ್ಲುಮಿಯಾ ಎಂದರೆ ಆಕೆಗೆ ತುಂಬಾ ಇಷ್ಟವಂತೆ. ಆತನಷ್ಟು ಒಳ್ಳೆಯ ವ್ಯಕ್ತಿ ಭೂಮಿ ಮೇಲೇ ಇಲ್ಲ. ಆತ ಎಲ್ಲಿಗೇ ಕರೆದರೂ ಇಲ್ಲ ಎನ್ನಲಾಗದು. ಅಷ್ಟು ಸ್ವೀಟ್ ವ್ಯಕ್ತಿ ಸಲ್ಮಾನ್ ಎಂದು ಝೋಯಾ ಜೈಕಾರ ಹಾಕಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ