ಮುಂಬೈ: ದೇಶದೆಲ್ಲೆಡೆ ಮತ್ತೆ ಕೊರೋನಾ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳನ್ನೂ ಇದು ಬಿಟ್ಟಿಲ್ಲ. ಇದೀಗ ಜಾನ್ ಅಬ್ರಹಾಂ ದಂಪತಿ ಕೊರೋನಾ ಸೋಂಕಿಗೊಳಗಾಗಿರುವ ಸುದ್ದಿ ಬಂದಿದೆ.
ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತು ಪತ್ನಿ ಪ್ರಿಯಾಗೆ ಕೊರೋನಾ ದೃಢಪಟ್ಟಿದ್ದು, ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂಬ ಮಾಹಿತಿ ಬಂದಿದೆ.
ಸದ್ಯಕ್ಕೆ ಇಬ್ಬರೂ ಹೋಂ ಐಸೋಲೇಷನ್ ನಲ್ಲಿದ್ದಾರೆ. ಇಬ್ಬರಿಗೂ ಅಲ್ಪ ಪ್ರಮಾಣದ ಲಕ್ಷಣಗಳಿವೆ ಎಂದು ತಿಳಿದುಬಂದಿದೆ. ಇನ್ನು, ದಂಪತಿ ಶೀಘ್ರ ಚೇತರಿಸಿಕೊಳ್ಳುವಂತೆ ಸೆಲೆಬ್ರಿಟಿಗಳು, ಅಭಿಮಾನಿಗಳು ಹಾರೈಸಿದ್ದಾರೆ.