ಬೆಂಗಳೂರು: ಈಗಷ್ಟೇ ನಿರ್ಬಂಧ ಸಡಿಲವಾಗಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಮಾಡಿಕೊಂಡು ಕೂತಿವೆ. ಆಗಲೇ ಒಮಿಕ್ರಾನ್ ಭೀತಿ ಚಿತ್ರರಂಗಕ್ಕೆ ತಟ್ಟಿದೆ.
ಬಹುನಿರೀಕ್ಷಿತ ಆರ್ ಆರ್ ಆರ್ ಸಿನಿಮಾ ಈಗಾಗಲೇ ಒಮಿಕ್ರಾನ್ ಭೀತಿಯಿಂದ ರಿಲೀಸ್ ಮುಂದೂಡಿಕೆ ಮಾಡಿದೆ. ಫೆಬ್ರವರಿ ವೇಳೆಗೆ ಕೊರೋನಾ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ವರದಿಗಳು ಕೇಳಿಬಂದಿವೆ.
ಹೀಗಾದಲ್ಲಿ ಈಗಾಗಲೇ ಘೋಷಣೆಯಾಗಿರುವ ಹಲವು ಸಿನಿಮಾಗಳು ರಿಲೀಸ್ ಡೇಟ್ ಮುಂದೂಡಿಕೆಯಾಗಬಹುದು. ವಿಕ್ರಾಂತ್ ರೋಣ ತಂಡ ಫೆಬ್ರವರಿ 24 ಕ್ಕೆ ರಿಲೀಸ್ ಡೇಟ್ ಘೋಷಣೆ ಮಾಡಿದ್ದರೂ ಮುಂದಿನ ಪರಿಸ್ಥಿತಿ ನೋಡಿಕೊಂಡು ಬದಲಾವಣೆ ಮಾಡುವುದಾಗಿ ಹೇಳಿದೆ. ಇದರಿಂದ ಮತ್ತೆ ರಿಲೀಸ್ ಗಾಗಿ ಸಿನಿಮಾಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬರಬಹುದು.