Publish Date: Sun, 02 Jan 2022 (10:22 IST)
Updated Date: Sun, 02 Jan 2022 (10:23 IST)
ಬೆಂಗಳೂರು: ನಟಿ ಸಂಜನಾ ಗಲ್ರಾನಿ ಈಗ ಗರ್ಭಿಣಿ. ನಾನೀಗ ಐದು ತಿಂಗಳ ಗರ್ಭಿಣಿ ಎಂದು ಸಂಜನಾ ಹೇಳಿದ್ದಾರೆ.
ಮೇ 2022 ರಲ್ಲಿ ಹೆರಿಗೆಯಾಗುವ ನಿರೀಕ್ಷೆಯಿದೆಯಂತೆ. ನನಗೆ ಗಂಡು ಮಗುವೇ ಆಗಲಿದೆ ಎಂದು ಅನಿಸುತ್ತಿದೆ ಎಂದು ಸಂಜನಾ ಹೇಳಿಕೊಂಡಿದ್ದಾರೆ.
ಡ್ರಗ್ಸ್ ವಿವಾದದ ವೇಳೆ ಸಂಜನಾ ಮದುವೆ ವಿಚಾರ ಹೊರಬಂದಿತ್ತು. ಡಾ. ಅಜೀಜ್ ಪಾಶಾ ಎಂಬವರನ್ನು ಸಂಜನಾ ಮದುವೆಯಾಗಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.