Select Your Language

Notifications

webdunia
webdunia
webdunia
webdunia

ಶ್ರೀಗಂಧದ ಬಳಕೆಯಿಂದ ಚರ್ಮದ ಈ ಸಮಸ್ಯೆಗಳನ್ನು ನಿವಾರಿಸಬಹುದು

ಶ್ರೀಗಂಧದ ಬಳಕೆಯಿಂದ ಚರ್ಮದ ಈ ಸಮಸ್ಯೆಗಳನ್ನು ನಿವಾರಿಸಬಹುದು
ಬೆಂಗಳೂರು , ಬುಧವಾರ, 31 ಮಾರ್ಚ್ 2021 (06:27 IST)
ಬೆಂಗಳೂರು : ಆಯುರ್ವೇದದಲ್ಲಿ ಶ್ರೀಗಂಧವು ಸೌಂದರ್ಯಕ್ಕೆ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ. ಇದು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ‍ ಶ್ರೀಗಂಧದ ಬಳಕೆಯಿಂದ ಚರ್ಮಕ್ಕೆ ಏನೆಲ್ಲಾ ಲಾಭ ಎನ್ನುವುದನ್ನು ತಿಳಿದುಕೊಳ್ಳಿ.

*ಶ್ರೀಗಂಧದಿಂಧ ಸನ್ ಟ್ಯಾನ್ ನ್ನು ನಿವಾರಿಸಬಹುದು. ಹಾಗಾಗಿ ಶ್ರೀಗಂಧದ ಪುಡಿಗೆ ಸೌತೆಕಾಯಿ ರಸ, ಮೊಸರು, ಜೇನುತುಪ್ಪ, ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಸನ್ ಟ್ಯಾನ್ ನಿವಾರಣೆಯಾಗುತ್ತದೆ.

*ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಶ್ರೀಗಂಧದ ಪುಡಿಯನ್ನು ರೋಸ್ ವಾಟರ್ ನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.

*ನಿಮ್ಮ ಚರ್ಮ ಮೃದುವಾಗಿ ಹೊಳೆಯುವಂತಾಗಲು ಶ್ರೀಗಂಧದ ಎಣ್ಣೆಯಿಂದ ಮುಖವನ್ನು ಮಸಾಜ್ ಮಾಡಿ. ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ.

*ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಶ್ರೀಗಂಧದ ಪುಡಿಗೆ ತೆಂಗಿನನೆಣ್ಣೆ ಮಿಕ್ಸ್ ಮಾಡಿ ಹಚ್ಚಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಕ್ಕುಳನ್ನು ಸ್ವಚ್ಛ ಮಾಡಿ ಸೋಂಕಿನಿಂದ ಪಾರಾಗಿ