ಬೆಂಗಳೂರು : ನಾವು ಸ್ನಾನ ಮಾಡುವಾಗ ದೇಹದ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತೇವೆ. ಆದರೆ ಹೊಕ್ಕುಳನ್ನು ಮಾತ್ರ ಕ್ಲೀನ್ ಮಾಡುವುದಿಲ್ಲ. ಹಾಗಾಗಿ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ವಿಚಿತ್ರವಾದ ವಾಸನೆ ಬರುತ್ತದೆ. ಇದರಿಂದ ಸೋಂಕು ಉಂಟಾಗುತ್ತದೆ.  ಹಾಗಾಗಿ  ಹೊಕ್ಕುಳನ್ನು ಸ್ವಚ್ಛಮಾಡಿ ಸೋಂಕಿನಿಂದ ಕಾಪಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
									
										
								
																	
-ನೀವು ಹೊಕ್ಕುಳ ಸೋಂಕನ್ನು ನಿವಾರಿಸಲು ಸ್ನಾನ ಮಾಡುವಾಗ ಹೊಕ್ಕುಳನ್ನು ಸೋಪ್ ನಿಂದ ವಾಶ್ ಮಾಡಿ. ಬಳಿಕ ಅದನ್ನು ಮೃದುವಾದ  ಬಟ್ಟೆಯಿಂದ ಒರೆಸಿಕೊಳ್ಳಿ.
									
			
			 
 			
 
 			
			                     
							
							
			        							
								
																	-ಹೊಕ್ಕುಳಿಗೆ ಟಾಲ್ಕಮ್ ಪೌಡರ್ ನ್ನು ಹಾಕಿ ಅದು ಹೊಕ್ಕಳ ದುರ್ವಾಸನೆಯನ್ನು ದೂರ ಮಾಡುತ್ತದೆ.
-ಉಡುಪುಗಳನ್ನು ನಿಯಮಿತವಾಗಿ ಬದಲಿಸುತ್ತೀರಿ. ಇಲ್ಲವಾದರೆ ಹೊಕ್ಕುಳ ಒಳಗೆ ಬೆವರು ಹೋಗಿ ಸೋಂಕು ಉಂಟಾಗುತ್ತದೆ.
									
										
								
																	-ಸಡಿಲವಾದ ಬಟ್ಟೆಗಳನ್ನು ಧರಿಸಿ ಹೊಕ್ಕುಳು ಉಸಿರಾಡಲು ಅನುವು ಮಾಡಿಕೊಡಿ.