Select Your Language

Notifications

webdunia
webdunia
webdunia
webdunia

ಬೇಸಿಗೆ ಕಾಲದಲ್ಲಿ ಚರ್ಮ ಹೊಳಪಿನಿಂದ ಕೂಡಿರಲು ಈ ಜೆಲ್ ತಯಾರಿಸಿ ಹಚ್ಚಿ

ಬೇಸಿಗೆ ಕಾಲದಲ್ಲಿ ಚರ್ಮ ಹೊಳಪಿನಿಂದ ಕೂಡಿರಲು ಈ ಜೆಲ್ ತಯಾರಿಸಿ ಹಚ್ಚಿ
ಬೆಂಗಳೂರು , ಶುಕ್ರವಾರ, 19 ಮಾರ್ಚ್ 2021 (07:40 IST)
ಬೆಂಗಳೂರು : ಬೇಸಿಗೆ ಕಾಲ ಶುರುವಾಗಿದೆ. ಈ ವೇಳೆ ಅತಿಯಾದ ಬೆವರು, ಸುಸ್ತು, ಆಯಾಸದಿಂದಾಗಿ ಮುಖ ಕಳೆಗುಂದುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಚರ್ಮ ಹೊಳಪಿನಿಂದ ಕೂಡಿರಲು ಈ ಜೆಲ್ ತಯಾರಿಸಿ ಹಚ್ಚಿ.

ಸೌತೆಕಾಯಿ ರಸ, ಅಲೋವೆರಾ ಜೆಲ್, ಜೇನುತುಪ್ಪ, ಕಾಫಿ, ಸಕ್ಕರೆ  ಇವಿಷ್ಟನ್ನು ತೆಗೆದುಕೊಂಡು, ಒಂದು ಪಾತ್ರೆಯಲ್ಲಿ ಜೇನುತುಪ್ಪ ಮತ್ತು ಸಕ್ಕರೆ ಮತ್ತು ನೀರನ್ನು ಬೆರೆಸಿ ಬಿಸಿ ಮಾಡಿ ಪಾಕ ತಯಾರಿಸಿಕೊಳ್ಳಿ. ಸಕ್ಕರೆ ಕರಗಿದ ಬಳಿಕ ಕಾಫಿ ಪುಡಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. ಬಳಿಕ ಇದು ತಣ‍್ಣಗಾದ ಮೇಲೆ  ಇದಕ್ಕೆ  ಸೌತೆಕಾಯಿ ರಸ, ಅಲೋವೆರಾ ಜೆಲ್ ಮಿಕ್ಸ್ ಮಾಡಿ ಚರ್ಮಕ್ಕೆ ಟೋನರ್ ಆಗಿ ಬಳಸಿ.

ಇದು ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ಮತ್ತು ಅಲೋವೆರಾ ಹಾಗೂ ಸೌತೆಕಾಯಿ ಬಿಸಿಲಿನ ತಾಪವನ್ನು ತಣಿಸಿ ಚರ್ಮವನ್ನು ತಂಪಾಗಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕು ಹಣ್ಣಿನ ಸೇವನೆಯಿಂದ ತೂಕವನ್ನು ನಿಯಂತ್ರಿಸಬಹುದೇ?