ಬೆಂಗಳೂರು: ಸಿಕ್ಸ್ ಪ್ಯಾಕ್ ಬಾಡಿ ಬೆಳೆಸಿಕೊಳ್ಳುವುದು ಪುರುಷರ ಕನಸು. ಹುಡುಗಿಯರೂ ಸದೃಢ ಕಾಯದ ಪುರುಷರಿಗೆ ಮರಳಾಗೇ ಆಗುತ್ತಾರೆ. ಹಾಗಾದರೆ ಸಿಕ್ಸ್ ಪ್ಯಾಕ್ ಬೆಳೆಸಿಕೊಳ್ಳಲು ಬಯಸುವವರು ಯಾವೆಲ್ಲಾ ಆಹಾರ ಸೇವಿಸಬೇಕು?
ಓಟ್ಸ್
ಓಟ್ಸ್ ನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳ ಸಂಗಮವಿದೆ ಎನ್ನಲಾಗುತ್ತದೆ. ಹಾಗಾಗಿ ಇದನ್ನು ತಪ್ಪದೇ ಸೇವಿಸಿ.
ಒಣ ಹಣ್ಣು
ಬಾದಾಮಿ, ಪೀನಟ್, ವಾಲ್ ನಟ್, ಗೋಡಂಬಿಯನ್ನು ಹೆಚ್ಚು ಸೇವಿಸಿ. ಇದು ದೇಹಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಸಹಕರಿಸುತ್ತದೆ.
ಮೊಟ್ಟೆ
ದೇಹ ಬೆಳೆಸಿಕೊಳ್ಳಬೇಕೆಂದರೆ ಮೊಟ್ಟೆ ಇರಲೇಬೇಕು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ದೇಹ ದಾರ್ಡ್ಯತೆ ಹೆಚ್ಚಿಸುತ್ತದೆ.
ಬಾಳೆ ಹಣ್ಣು
ಮಾಂಸಖಂಡಗಳ ಬೆಳವಣಿಗೆಗೆ ಬಾಳೆಹಣ್ಣು ಹೇಳಿ ಮಾಡಿಸಿದ ಆಹಾರ ವಸ್ತು. ಇದರಲ್ಲಿ ಪೊಟೇಶಿಯಂ ಅಂಶ ಹೆಚ್ಚಿದೆ.
ಡೈರಿ ಉತ್ಪನ್ನಗಳು
ಹಾಲು, ಮೊಸರು, ಚೀಸ್, ಕೆನೆಯಂತಹ ಡೈರಿ ಉತ್ಪನ್ನಗಳು ಹೆಚ್ಚು ಸೇವಿಸಿ. ಇದರಲ್ಲಿ ಮಾಂಸಖಂಡಗಳು ತುಂಬಿ ಬರಲು ಸಹಾಯ ಮಾಡುವ ಪೋಷಕಾಂಶಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ