Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 12 ಮಾರ್ಚ್ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯದೊತ್ತಡದಿಂದ ದೇಹ ಹೈರಾಣಾಗುವುದು. ಆರೋಗ್ಯ ಸಂಬಂಧೀ ಸಮಸ್ಯೆ ಪರಿಹಾರಕ್ಕೆ ಆಸ್ಪತ್ರೆ ಅಲೆದಾಟ ತಪ್ಪದು. ಮೇಲಧಿಕಾರಿಗಳನ್ನು ಸಂತುಷ್ಟಗೊಳಿಸಲು ನಾನಾ ಸರ್ಕಸ್ ಮಾಡಬೇಕಾಗುತ್ತದೆ.

ವೃಷಭ: ಸಂಚಾರದಿಂದ ದೇಹಾಯಾಸವಾಗುವುದು. ವ್ಯಾಪಾರ, ವ್ಯವಹಾರದಲ್ಲಿ ಹಣಕಾಸಿನ ತೊಂದರೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ. ನಿರುದ್ಯೋಗಿಗಳಿಗೆ ಕಾಯುವಿಕೆ ಅನಿವಾರ್ಯ.

ಮಿಥುನ: ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಕ್ಕಿ ವಿವಾಹಕ್ಕೆ ತಯಾರಿ ನಡೆಸುವಿರಿ. ಖರ್ಚು ವೆಚ್ಚಗಳು ಅಧಿಕವಾಗುವುದು. ಕಷ್ಟದ ಸಂದರ್ಭದಲ್ಲಿ ಮಿತ್ರರ ಸಹಕಾರ ದೊರೆಯಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಆರ್ಥಿಕ ಮುಗ್ಗಟ್ಟುಗಳು ದೂರವಾಗಿ ನಿಧಾನವಾಗಿ ಚೇತರಿಕೆ ಕಾಣುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ದೊರೆಯುವುದು. ಉದ್ಯೋಗಿಗಳಿಗೆ ಮುನ್ನಡೆ, ಬಡ್ತಿ ಯೋಗವಿದೆ. ವಾಸ ಸ್ಥಳ ಬದಲಾವಣೆಗೆ ಚಿಂತನೆ ಮಾಡುವಿರಿ.

ಸಿಂಹ: ಆರೋಗ್ಯದಲ್ಲಿ ಏರುಪೇರಾಗಲಿದೆ. ಮನೆ ಮಾಲಿಕರೊಂದಿಗೆ ಕಿರಿ ಕಿರಿ ಇರುತ್ತದೆ. ಖರ್ಚು  ವೆಚ್ಚಗಳ ಬಗ್ಗೆ ಕಡಿವಾಣವಿರಲಿ. ಆಸ್ತಿ ವಿವಾದಗಳು ನ್ಯಾಯಾಲಯದಲ್ಲಿದ್ದರೆ ನಿಮ್ಮ ಪರವಾಗಿ ತೀರ್ಪು ಬರುವುದು.

ಕನ್ಯಾ: ಎಷ್ಟೋ ದಿನಗಳಿಂದ ಬಾಕಿಯಿದ್ದ ಹರಕೆ ತೀರಿಸುವಿರಿ. ಕೌಟುಂಬಿಕ ನಿರ್ವಹಣೆಗಾಗಿ ಖರ್ಚು ವೆಚ್ಚಗಳು ಅಧಿಕವಾಗುವುದು. ಮನೆಯಲ್ಲಿ ಬಂಧು ಮಿತ್ರರ ಆಗಮನದಿಂದ ಒಂದು ರೀತಿಯ ಸಂತಸದ ವಾತಾವರಣವಿರುತ್ತದೆ.

ತುಲಾ: ವಾಣಿಜ್ಯೋದ್ಯಮಿಗಳಿಗೆ ಶುಭ ದಿನ. ಹಾಕಿದ ಬಂಡವಾಳ ಕೈಗೆ ಸಿಗಲಿದೆ. ಮನೆಯಲ್ಲಿ ಅವಿವಾಹಿತರಿದ್ದರೆ ಅವರ ವಿವಾಹ ಕಾರ್ಯಗಳಿಗೆ ತಯಾರಿ ನಡೆಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಖರ್ಚು ವೆಚ್ಚಗಳು ಅಧಿಕವಾಗಿ ನಿಮ್ಮ ಚಿಂತೆಗೆ ಕಾರಣವಾದೀತು. ಉದ್ಯೋಗದಲ್ಲಿ ಮುನ್ನಡೆಯಿದ್ದರೂ, ಹಿತ ಶತ್ರುಗಳು ಬೆನ್ನ ಹಿಂದೆಯೇ ಇದ್ದು, ನಿಮಗೆ ತೊಂದರೆ ಕೊಡುವರು. ಚಾಡಿ ಮಾತುಗಳಿಗೆ ಕಿವಿಗೊಡದಿರಿ.

ಧನು: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ.

ಮಕರ: ಯಾವುದೋ ಒಂದು ಚಿಂತೆ ಮನಸ್ಸನ್ನು ಘಾಸಿಗೊಳಿಸಲಿದೆ. ಬೇಡದ ವಿಚಾರಗಳ ಬಗ್ಗೆ ಚಿಂತೆ ಮಾಡುವುದು ಕಡಿಮೆ ಮಾಡಿ. ಕುಟುಂಬದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಗಮನ ಕೊಡಿ. ಸಂಗಾತಿಯ ಮಾತಿಗೆ ಬೆಲೆ ಕೊಡಿ. ನೆಮ್ಮದಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.

ಕುಂಭ:  ಆರ್ಥಿಕವಾಗಿ ಸಾಕಷ್ಟು ಧನಾಗಮನವಾಗಿ ಚೇತರಿಕೆ ಕಾಣುವಿರಿ. ಆದರೆ ಮಾನಸಿಕ ನೆಮ್ಮದಿ ಇರದು. ದುಡುಕು ವರ್ತನೆಯಿಂದ ನೆರೆಹೊರೆಯವರೊಂದಿಗೆ ವಾಗ್ವಾದಕ್ಕಿಳಿಯದಿರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಮೀನ: ಹಣ ಪೋಲು ಮಾಡುವುದಕ್ಕೆ ಕಡಿವಾಣ ಹಾಕಬೇಕು. ನಿರುದ್ಯೋಗಿಗಳಿಗೆ ವಿದೇಶದಿಂದ ಉದ್ಯೋಗ ಅವಕಾಶದ ಸುದ್ದಿ ಬರುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ಮನೆ ಕನಸು ನನಸಾಗಲು ಶಿವನಿಗೆ ಈ ಹೂವನ್ನು ಅರ್ಪಿಸಿ