Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 11 ಮಾರ್ಚ್ 2019 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ನಿಮ್ಮ ಕ್ರಿಯಾತ್ಮಕ ಆಲೋಚನೆಗಳು ಹೆಚ್ಚು ಪ್ರಯೋಜನಕ್ಕೆ ಬರುವುದು. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಹೊಸ ವ್ಯವಹಾರಕ್ಕೆ ಕೈಹಾಕಿದರೆ ಲಾಭವಾಗುವುದು.

ವೃಷಭ: ನಿಮ್ಮ ತ್ಯಾಗದ ಮನೋಭಾವ ನಿಮ್ಮನ್ನು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಕರೆದೊಯ್ಯಲಿದೆ. ಯಾವುದೇ ಕೆಲಸಕ್ಕೂ ಮುನ್ನ ದುಡುಕದೆ ತಾಳ್ಮೆಯಿಂದ ಮುಂದುವರಿದರೆ ಇಂದಿನ ದಿನ ಯಶಸ್ಸು ನಿಮ್ಮದಾಗುವುದು.

ಮಿಥುನ: ಯಾವುದೋ ಕೆಲಸಕ್ಕೆ ತೊಡಗುವ ಮುನ್ನ ಮಾಡಬೇಕೋ ಬೇಡವೋ ಎಂದ ಧ್ವಂದ್ವ ಕಾಡಲಿದೆ. ನಿರುದ್ಯೋಗಿಗಳು ತಮಗೆ ಒದಗಿ ಬರುವ ತಾತ್ಕಾಲಿಕ ಉದ್ಯೋಗವನ್ನು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ. ಶ್ರೀದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ಹಣಕಾಸಿನ ಮುಗ್ಗಟ್ಟುಗಳು ದೂರವಾಗಿ ಲಾಭ ಕಾಣುವಿರಿ. ಆದರೆ ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ.

ಸಿಂಹ: ಜಾಣ್ಮೆಯಿಂದ ವರ್ತಿಸಿದರೆ ಎಂತಹ ಕಷ್ಟವೇ ಆದರೂ ಯಶಸ್ಸು ನಿಮ್ಮದಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪ್ರೇಮಿಗಳಿಗೆ ಮನೆಯವರ ವಿರೋಧ ಕಂಡುಬರಬಹುದು.

ಕನ್ಯಾ: ಆರ್ಥಿಕ ಮುಗ್ಗಟ್ಟುಗಳು ತಲೆದೋರಿ ಕೈ ಹಿಡಿದ ಕಾರ್ಯಗಳು ಅರ್ಧಕ್ಕೇ ನಿಲ್ಲುವುದು. ಹೊಸ ವ್ಯಾಪಾರಕ್ಕೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾದೀತು. ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಇಟ್ಟುಕೊಂಡಿರಿ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಕಾಣಲಿದ್ದೀರಿ. ನೀವು ಮಾಡುವ ಕೆಲಸದಿಂದ ಬೇರೆಯವರಿಗೂ ಉಪಕಾರವಾಗಲಿದೆ. ಆದರೆ ಬೆನ್ನ ಹಿಂದೆ ಕಾಡುವ ಹಿತಶತ್ರುಗಳ ಬಗ್ಗೆ ಎಚ್ಚರ  ಅಗತ್ಯ. ವಿದ್ಯಾರ್ಥಿಗಳು ಪ್ರಯತ್ನ ಬಲ ಮುಂದುವರಿಸಬೇಕು.

ವೃಶ್ಚಿಕ: ಎಂದೋ ಆರಂಭ ಮಾಡಿದ್ದ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿ ಲಾಭ ಕಾಣಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಜಾಣ್ಮೆಯ ಕೆಲಸಗಳಿಗೆ ಮೆಚ್ಚುಗೆ ಪಡೆಯಲಿದ್ದೀರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಧನು: ಪರಿಶ್ರಮ, ಪ್ರಯತ್ನ ಬಲವಿಲ್ಲದೇ ಅಂದುಕೊಂಡ ಕಾರ್ಯ ನೆರವೇರದು. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಬಹುದು.

ಮಕರ: ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಹೊಸ ವಸ್ತು, ಆಸ್ತಿ ಖರೀದಿಗೆ ಚಿಂತನೆ ಮಾಡುವಿರಿ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪಿಗೆಯಾಗುವ ಸಂಬಂಧಗಳು ಕೂಡಿಬರುವುದು. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ಸಿಗಲಿದೆ.

ಕುಂಭ:  ತಾಳ್ಮೆಯಿಂದ ಮುನ್ನಡೆಯಿರಿ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಕಾರ್ಯ ಹಾನಿ ಎಂಬುದನ್ನು ಮರೆಯಬೇಡಿ. ಸಮಯಕ್ಕೆ ಸರಿಯಾಗಿ ಧನಾಗಮನವಾಗಿ ಚೇತರಿಕೆ ಕಾಣುವಿರಿ. ಹಿರಿಯರು ತೀರ್ಥ ಯಾತ್ರೆ ಕೈಗೊಳ್ಳುವರು.

ಮೀನ: ನಯವಾಗಿ ಮಾತನಾಡುತ್ತಾ ಬರುವ ನಯವಂಚಕರನ್ನು ದೂರವಿಡಿ. ಉದ್ಯೋಗ, ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತೀರಿ. ಸಂಗಾತಿಯಿಂದ ಸಹಕಾರ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನಕ್ಕೆ ಹೋದಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ