Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 9 ಮಾರ್ಚ್ 2019 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ನಿಮಿತ್ತ ಕಿರು ಸಂಚಾರ ಮಾಡಬೇಕಾಗಿ ಬರುತ್ತದೆ. ಸಂಗಾತಿಯ ಆರೋಗ್ಯ ಕೈಕೊಟ್ಟು ಚಿಂತೆಗೆ ಕಾರಣವಾಗುವುದು. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ.

ವೃಷಭ: ಸಕಾಲದಲ್ಲಿ ಹಣಕಾಸಿನ ನೆರವು ಸಿಕ್ಕಿ ಕಷ್ಟಗಳೆಲ್ಲಾ ದೂರವಾಗುವುದು. ಆರೋಗ್ಯ ಭಾಗ್ಯ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆದರೆ ಹಿತಶತ್ರುಗಳಿಂದ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ.

ಮಿಥುನ: ಅನಿರೀಕ್ಷಿತವಾಗಿ ಬರುವ ಬಂಧುಗಳಿಂದ ಖರ್ಚು ವೆಚ್ಚಗಳು ಅಧಿಕವಾಗುವುದು. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯ ಜೀವನ ಮಾಡಬೇಕಾಗುತ್ತದೆ. ಮಾನಸಿಕ ನೆಮ್ಮದಿಗೆ ದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ಹೊಸ ವ್ಯಾಪಾರ, ವ್ಯವಹಾರಗಳಿಗೆ ಕೈ ಹಾಕಲು ಮನಸ್ಸು ಮಾಡುವಿರಿ. ಮಿತ್ರರ ಸಹಕಾರ ದೊರೆಯಲಿದೆ. ಆದರೆ ಆಸ್ತಿ ವಿವಾದಗಳು ಎದುರಾಗುವುದು. ಸಹನೆಯಿಂದ ಸಂಸಾರ ನಿಭಾಯಿಸಬೇಕಾಗುತ್ತದೆ.

ಸಿಂಹ: ಮಾತಾ ಪಿತರ ಆಶೀರ್ವಾದ ನಿಮ್ಮ ಮೇಲಿರಲಿದೆ. ಇದರಿಂದ ನೀವು ಕೈಗೊಳ್ಳಲಿರುವ ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ. ಸಾಮಾಜಿಕವಾಗಿ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಡಬೇಕು.

ಕನ್ಯಾ: ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ. ಪ್ರೇಮಿಗಳಿಗೆ ಮನೆಯವರ ಅಸಮಾಧಾನ ಕಟ್ಟುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತೀವ್ರ ಆಸಕ್ತಿ ಕಂಡುಬರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ತಪ್ಪದು. ಸಹೋದ್ಯೋಗಿಗಳು ನಿಮ್ಮ ತಪ್ಪುಗಳನ್ನು ಮೇಲಧಿಕಾರಿಗಳಿಗೆ ಚಾಡಿ ಹೇಳುವರು. ಆರ್ಥಿಕವಾಗಿ ಸಮಾಧಾನಕರ ವಾತಾವರಣವಿರಲಿದೆ. ಚಿಂತೆ ಮಾಡಬೇಕಾಗಿಲ್ಲ.

ವೃಶ್ಚಿಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾಗುತ್ತದೆ. ಸಹೋದರರೊಂದಿಗೆ ಆಸ್ತಿ ಸಂಬಂಧ ಕಲಹವಾಗಬಹುದು. ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಖರ್ಚು ವೆಚ್ಚಗಳು ಅಧಿಕವಾಗಲಿದೆ. ಎಚ್ಚರಿಕೆಯಿರಲಿ.

ಧನು: ಸಂಕಷ್ಟದ ಸಮಯದಲ್ಲೂ ಹೊಸ ಚಿಂತನೆಗಳು ಮೂಡಿಬಂದು ಪರಿಹಾರ ಕಂಡುಕೊಳ್ಳುತ್ತೀರಿ. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣವಿರುತ್ತದೆ. ಆರೋಗ್ಯ ಕೈಕೊಡುವ ಸಂಭವವಿದೆ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತೀರಿ. ಆದರೆ ದುಡುಕು ವರ್ತನೆ ತೋರಿದರೆ ಕಾರ್ಯ ಸಫಲವಾಗದು. ಕೃಷಿ ಕ್ಷೇತ್ರದಲ್ಲಿರುವವರು ನೀರಿಗಾಗಿ ಪರಿತಪಿಸಬೇಕಾದೀತು. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.

ಕುಂಭ: ಆರ್ಥಿಕ ವ್ಯವಹಾರಗಳಲ್ಲಿ, ಶೇರು ವ್ಯವಹಾರಗಳಲ್ಲಿ ಲಾಭ ಕಾಣಲಿದ್ದೀರಿ. ಕಷ್ಟಗಳು ಬಂದಾಗ ಮಿತ್ರರ ಸಹಕಾರ ದೊರೆಯಲಿದೆ. ಹಾಗಾಗಿ ಚಿಂತೆ ಬೇಡ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುತ್ತೀರಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ, ಸಾಮಾಜಿಕವಾಗಿಯೂ ಗೌರವ ಸಂಪಾದಿಸುತ್ತೀರಿ. ಆರ್ಥಿಕ, ಕೌಟುಂಬಿಕವಾಗಿ ನಿಧಾನವಾಗಿ ಕಷ್ಟಗಳು ದೂರವಾಗಿ ಚೇತರಿಕೆಯ ಅನುಭವ ಪಡೆಯಲಿದ್ದೀರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಒಳ್ಳೆಯ ಉದೋಗ್ಯ ಸಿಗಲು ಈ ಚಿಕ್ಕ ಪರಿಹಾರವನ್ನು ಮಾಡಿ