Publish Date: Fri, 08 Mar 2019 (08:49 IST)
Updated Date: Fri, 08 Mar 2019 (08:50 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಮೀನ ರಾಶಿ ನೋಡೋಣ.
ಮೀನ ರಾಶಿಯವರದ್ದು ಒಂದು ರೀತಿಯ ಗಂಭೀರ ವ್ಯಕ್ತಿತ್ವ. ಇವರು ತಮ್ಮ ಲವ್ ಲೈಫ್ ಬಗ್ಗೆ ಗಂಭೀರವಾಗಿರುತ್ತಾರೆ. ಒಂದು ರೀತಿಯ ಸಾಹಸಿಗಳು, ಹಾಗೆಯೇ ಒಂದು ವಿಚಾರವನ್ನು ಅತಿಯಾಗಿ ಹಚ್ಚಿಕೊಳ್ಳುವವರು.
ಲವ್ ವಿಚಾರಕ್ಕೆ ಬಂದರೆ ಇವರು ತುಂಬಾ ಆಳವಾಗಿ ಪ್ರೀತಿಸುತ್ತಾರೆ. ಹಾಗೆಯೇ ತಮಗೆ ಸಾಕೆನಿಸಿದಾಗ ಸದ್ದಿಲ್ಲದೇ ಸಂಬಂಧದಿಂದ ಹೊರಬರುವ ನಿಪುಣರು. ಇವರಲ್ಲಿ ಸಹನೆಯ ಗುಣ ಕಡಿಮೆ. ಇವರೊಂದಿಗೆ ಪ್ರೀತಿಯ ಸಂಬಂಧ ಗಟ್ಟಿಗೊಳ್ಳಲು ಸಾಕಷ್ಟು ಸಹನೆ ಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ